
ಸಮಾಜದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬೇಕೆನ್ನುವ ಚಿಂತನೆಯಡಿ ಕೆಎಂಸಿ ಆಸ್ಪತ್ರೆಯಿಂದ ಆರಂಭಿಸಿದ್ದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಎರಡು ದಶಕಗಳನ್ನು ಪೂರೈಸಿರುವ ಹಂತದಲ್ಲಿ, ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸುವ ದೃಷ್ಟಿಯಿಂದ ‘ಸ್ಮಾರ್ಟ್ ಕಾರ್ಡ್’ನ್ನು ಹೊರ ತರಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮನಮೋಹನ ಡಿ.ಬಿ. ಅವರು ಮನವಿ ಮಾಡಿದ್ದಾರೆ.
ಮಡಿಕೇರಿಯಲ್ಲಿ ಸೆ.5 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಆರೋಗ್ಯ ಕಾರ್ಡ್‍ಗಳ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು, ದ.ಕ. ಹಾಗೂ ಕೊಡಗು ಜಿಲ್ಲಾ ವ್ಯಾಪ್ತಿಯ ಜನತೆ ಸ್ಮಾರ್ಟ್ ಕಾರ್ಡ್ ಹೊಂದಿಕೊಳ್ಳುವ ಮೂಲಕ ಕೆಎಂಸಿ ಸಮೂಹ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು. ಕಾರ್ಡ್‌ಗಳನ್ನು ಒಂದು ಅಥವಾ ಎರಡು ವರ್ಷಗಳಿಗೆ ಅನ್ವಯವಾಗುವಂತೆ ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆಯೆಂದು ಮಾಹಿತಿ ನೀಡಿದರು.
ಮಣಿಪಾಲ್ ಆರೋಗ್ಯ ಕಾರ್ಡ್ ಹೊಂದಿರುವವರು 1 ವರ್ಷಕ್ಕೆ ವೈಯಕ್ತಿಕವಾಗಿ 220 ರೂ. ನೀಡಿ ನವೀಕರಣ ಮಾಡಿಕೊಳ್ಳಬಹುದಾಗಿದ್ದು, ಕುಟುಂಬಕ್ಕೆ ಸಂಬಂಧಿಸಿದ್ದಾದರೆ 460 ರೂ. ಮತ್ತು ಕುಟುಂಬ ಪ್ಲಸ್ ಯೋಜನೆಯಾಗಿದ್ದರೆ 600 ರೂ. ನೀಡಿ ನವೀಕರಣ ಮಾಡಿಕೊಳ್ಳಬಹುದು. ನೂತನ ಕಾರ್ಡ್‌ನ್ನು ವೈಯಕ್ತಿಕ 1 ವರ್ಷಕ್ಕೆ 250 ರೂ, ಕುಟುಂಬವಾದಲ್ಲಿ 500 ರೂ. ಹಾಗೂ ಕುಟುಂಬ ಪ್ಲಸ್ ಆದಲ್ಲಿ 650 ರೂ ನೀಡಿ ಪಡೆದುಕೊಳ್ಳಬಹುದು. ನೂತನ ಕಾರ್ಡ್ ವೈಯಕ್ತಿಕ 2 ವರ್ಷದ ಅವಧಿಯದ್ದನ್ನು 400 ರೂ., ಕುಟುಂಬ 700 ರೂ. ಮತ್ತು ಕುಟುಂಬ ಪ್ಲಸ್ ಆದಲ್ಲಿ 850 ರೂ. ನೀಡಿ ಪಡೆದುಕೊಳ್ಳಲು ಅವಕಾಶ ಒದಗಿಸಲಾಗಿದೆಯೆಂದು ಈ ವೇಳೆ ಮಾಹಿತಿ ನೀಡಿದರು.
ಆರೋಗ್ಯ ಕಾರ್ಡ್ ಹೊಂದಿರುವವರು ಕೆಎಂಸಿ ಸಮೂಹ ಆಸ್ಪತ್ರೆಗಳಾದ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆ, ಕಟೀಲು ನ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ, ಗೋವಾದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಲ್ಲಿ ರಿಯಾಯಿತಿ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಮಣಿಪಾಲ ಆರೋಗ್ಯ ಕಾರ್ಡನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಸುಳ್ಯ ತಾಲೂಕಿನಾದ್ಯಂತ
ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದ್ದು ಇವರಿಂದ ಕಾರ್ಡ್ ಗಳನ್ನು ಪಡೆಯಬಹುದು. (ಸುಬ್ರಮಣ್ಯ) ಮೊ.9448437831, 8762064023, (ಬೆಳ್ಳಾರೆ) ಮೊ. 8762554582 (ಜಾಲ್ಸೂರು) ಮೊ. 9448501563, 9972289610
(ಎಲಿಮಲೆ) ಮೊ.9980070478
(ಗುತ್ತಿಗಾರು) ಮೊ.9448428830
(ಅರಂತೋಡು) ಮೊ.9483803883
(ಪೆರಾಜೆ) ಮೊ. 8277773381
(ಸುಳ್ಯ) ಮೊ.9535412911, 9611572557,9449209225
ಅಲ್ಲದೇ ಹರ್ಷ ಮೆಡಿಕಲ್ಸ್, ಹಿಮಗಿರಿ ಮೆಡಿಕಲ್ಸ್ ಮತ್ತು ಮಾಸ್ಟರ್ ಮೆಡಿಕಲ್ಸ್ ಗಳಲ್ಲಿ ಕಾರ್ಡ್‍ಗಳನ್ನು ಪಡೆಯಬಹುದು.
ಕಾರ್ಡ್‍ನಿಂದ ದೊರಕುವ ಉಪಯೋಗ- ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಎಲ್ಲಾ ತಜ್ಞ ಅಥವಾ ಸೂಪರ್ ಸ್ಪೆಷಾಲಿಟಿ ವೈದ್ಯರ ಹೊರ ರೋಗಿ ಸಮಾಲೋಚನೆ ಮೇಲೆ ಶೇ.50 ರ ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ.20 ರ ರಿಯಾಯಿತಿ, ವಿಕಿರಣ ಪರೀಕ್ಷೆಗಳ ಮೇಲೆ ಶೇ.20 ರಿಯಾಯಿತಿ, ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ ಶೇ.10 ರ ರಿಯಾಯಿತಿ, ಹೊರ ರೋಗಿ ದಂತ ಚಿಕಿತ್ಸೆಗೆ ಶೇ.25 ರಿಯಾಯಿತಿ ದೊರಕುತ್ತದೆ. ಜನರಲ್ ವಾರ್ಡ್‍ನಲ್ಲಿ ಒಳರೋಗಿಯಾಗಿದ್ದಲ್ಲಿ ಕನ್ಸೂಮೇಬಲ್ಸ್ ಮತ್ತು ಪ್ಯಾಕೇಜ್‍ಗಳನ್ನು ಹೊರತು ಪಡಿಸಿ, ಬಿಲ್ಲಿನಲ್ಲಿ ಶೇ.25 ರಿಯಾಯಿತಿ ದೊರಕುತ್ತದೆ. ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ 8971957575,9844002374 ಗೆ ಕರೆ ಮಾಡಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.