Ad Widget

ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅಧ್ಯಾಪಕರುಗಳಿಗೆ ಎಸ್ಸೆಸ್ಸೆಫ್ ನ ಗೌರವಾರ್ಪಣೆ

ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುಳ್ಯ ತಾಲೂಕಿನ ಅಧ್ಯಾಪಕರುಗಳಾದ ಸ. ಪ. ಪೂ. ಕಾಲೇಜು ಪಂಜ ಅಧ್ಯಾಪಕರಾದ ಟೈಟಸ್ ವರ್ಗೀಸ್ ಹಾಗೂ ಸ. ಉ. ಹಿ. ಪ್ರಾ. ಶಾಲೆ ಇಡ್ಯಡ್ಕ ಅಧ್ಯಾಪಕಿ ರೇಖಾ ಸರ್ವೋತ್ತಮ ಶೇಟ್ ಮತ್ತು ಸ. ಕಿ. ಪ್ರಾ. ಶಾಲೆ ಬಾನಡ್ಕ ಅಧ್ಯಾಪಕಿ ಜಾನಕಿ. ಕೆ ರವರಿಗೆ SSF ಸುಳ್ಯ ಡಿವಿಷನ್ ಸಮಿತಿ ವತಿಯಿಂದ ಗೌರವಾರ್ಪಣೆ ಸೆಪ್ಟಂಬರ್ 6ರಂದು ಜರಗಿತು.

. . . . . . . . .

ತಮಗೆ ಲಭಿಸಿದ ಜಿಲ್ಲಾ ಪ್ರಶಸ್ತಿ ಬಗ್ಗೆ ಮಾತನಾಡಿದ ಅಧ್ಯಾಪಕರುಗಳು ಸಂತೋಷ ವ್ಯಕ್ತಪಡಿಸಿ ಸಹ ಶಿಕ್ಷಕರು, ವಿದ್ಯಾರ್ಥಿಗಳು, ರಕ್ಷಕರು ಪ್ರೋತ್ಸಾಹ, ಪ್ರೀತಿ, ವಿಶ್ವಾಸದಿಂದ ಸಾಧ್ಯವಾಗಿದೆ ಎಂದರು. ಜಿಲ್ಲಾಡಳಿತದ ಅಧಿಕೃತ ಸನ್ಮಾನದ ನಂತರ ಪ್ರಥಮವಾಗಿ ನಮ್ಮ ಮನೆಗಳಿಗೆ ಭೇಟಿ ಕೊಟ್ಟು ಸನ್ಮಾನಿಸಿದ ಹಾಗೂ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿನ SSFನ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.

. . . . . . .

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಂಜದಿ, ಕೋಶಾಧಿಕಾರಿ ಹಸೈನಾರ್ ನೆಕ್ಕಿಲ, ಸಮಿತಿ ಸದಸ್ಯರಾದ ಸ್ವಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ, ಜಬ್ಬಾರ್ ಹನೀಫಿ ನಿಂತಿಕ್ಕಲ್ಲು, ಸಿರಾಜ್ ಸಅದಿ ಅಲೆಕ್ಕಾಡಿ, ಕಬೀರ್ ಜಟ್ಟಿಪಳ್ಳ, ಶಮೀರ್ ಡಿ.ಎಚ್ ನಿಂತಿಕ್ಕಲ್ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಸಾಬಿತ್ ನಿಂತಿಕ್ಕಲ್ಲ್, ಸಮಿತಿ ಸದಸ್ಯ ಶಿಹಾಬ್ ನೆಕ್ಕಿಲ ನಿಯೋಗದಲ್ಲಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading