Ad Widget

ಬೆಳ್ಳಿಪ್ಪಾಡಿಯ ಇಂದ್ರಾವತಿ ಎನ್. ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಮಂಗಳೂರು ನಗರ ಉತ್ತರವಲಯದ ಗಾಂಧಿನಗರ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಯಾಗಿ ಸೇವೆ ಸಲ್ಲಿಸುತ್ತಿರುವ ಇಂದ್ರಾವತಿ ಎನ್ ಇವರು 2020 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. 1996 ರಲ್ಲಿ ಸೇವೆಗೆ ಸೇರಿದ ಇವರು 24 ವರ್ಷಗಳ ಸುದೀರ್ಘ ಅವಧಿಯಲ್ಲಿ 22 ವರ್ಷ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಉತ್ತಮ ಜನಾನುರಾಗಿಯಾಗಿದ್ದಾರೆ. ಇಲಾಖೆ ವತಿಯಿಂದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಗುರು ಚೇತನ, ನಲಿಕಲಿ ಸಮಗ್ರ ತರಬೇತಿಯನ್ನು ಪಡೆದು ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿ ಕೊ‌ಂಡಿದ್ದಾರೆ. ಕಳೆದ ಬಾರಿ ಉತ್ತಮ ನಲಿಕಲಿ ಘಟಕ ಶಾಲೆ ಎಂಬ ಬಿರುದನ್ನು ಶಿಕ್ಷಕ ದಿನಾಚರಣೆ ಯಂದು ಪಡೆದುಕೊಂಡಿರುತ್ತಾರೆ. ಹಲವಾರು ಶಿಕ್ಷಕರಿಗೆ ನಲಿಕಲಿ ತರಬೇತಿಯನ್ನು ನೀಡಿರುತ್ತಾರೆ.
ಇವರು ಮಂಗಳೂರು ಉತ್ತರ ವಲಯದ ಶಿಕ್ಷಕರ ಸಂಘದ ಕಾರ್ಯದರ್ಶಿ ಯಾಗಿ,ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ನರಿಯೂರು ಮನೆತನದ ದಿ. ಕೃಷ್ಣಪ್ಪ ಗೌಡ (ಬಾಬು) ಹಾಗೂ ಸೀತಮ್ಮ ದಂಪತಿಗಳ ಪುತ್ರಿ. ಇವರ ಸಹೋದರಿಯರು ಕೂಡ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಪತಿ ಬೆಳ್ಳಿಪ್ಪಾಡಿ ದೇವರಗುಂಡದ ಬಿ.ಎಂ. ವಿಶ್ವನಾಥ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇವರ ಅಕ್ಕ ರೇವತಿ ಗಂಗಾಧರ ರಾಮಕುಂಜ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಸಸಹೋದರಿ ನಿರ್ಮಲ ಧರ್ಣಪ್ಪ ಗೌಡ ಪುತ್ತೂರಿನ ಬಿಳಿಯಾರು ಕಟ್ಟೆ ಜೂನಿಯರ್ ಕಾಲೇಜ್ ನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಮಸ್ಕತ್ ನಲ್ಲಿ ಇಂಜಿನಿಯರ್ ಆಗಿರುವ ಮಗ ವಿನುತನ್ ಬಿ.ವಿ, ದುಬೈನಲ್ಲಿ ಉದ್ಯೋಗಿಯಾಗಿರುವ ಸೊಸೆ ದೀಕ್ಷಾ ಬರಡಿಮಜಲು, ಮೈರಿಸಲ್ಟ್ ಕಂಪನಿಯಲ್ಲಿ ಉದ್ಯೋಗಿಯಾಗಿರು ಮಗಳು ಸಹನ, ಉದ್ಯಮಿಯಾಗಿರುವ ಅಳಿಯ ಧೀರಜ್ ಹಾಗೂ ಮೂವರು ಸಹೋದರ, ಮೂವರು ಸಹೋದರಿಯರ ಬೆಂಬಲದಿಂದ ಈ ಸಾಧನೆಗೆ ಮಾಡಿದ್ದಾರೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!