ಕೊಲ್ಲಮೊಗ್ರ ಸ.ಹಿ. ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಗೋಪಾಲ್ ಏನೆಕಲ್ಲು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ ಗುತ್ತಿಗಾರು ಜೂನಿಯರ್ ಕಾಲೇಜಿಗೆ ಭಡ್ತಿಹೊಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತಿದ್ದಾರೆ.
ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಪಟುವಾಗಿರುವ ಇವರು 1998 ರಲ್ಲಿ ಅಡ್ಪಂಗಾಯ ಹಿ.ಪ್ರಾ.ಶಾಲೆಗೆ ದೈ.ಶಿ.ಶಿಕ್ಷಕರಾಗಿ ಸೇರಿ ವೃತ್ತಿ ಆರಂಭಿಸಿದರು. ಅಲ್ಲಿ 7 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಕೊಲ್ಲಮೊಗ್ರ ಕ್ಕೆ ವರ್ಗಾವಣೆಗೊಂಡು ಸುಮಾರು 15 ವರ್ಷಗಳಿಂದ ಅಲ್ಲಿ ಕೆಲಸ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕುವೆಂಪು ಯುನಿವರ್ಸಿಟಿ ಮಲ್ಲಾಡಿಹಳ್ಳಿ ಇಲ್ಲಿ ಬಿಪಿಎಡ್ ಪದವಿ ಪಡೆದಿದ್ದಾರೆ. ಇವರ ಪತ್ನಿ ಸುನಿತಾ ಜ್ಯೋತಿ ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕಿಯಾಗಿ ಕೆಲಸ ನಿರ್ವಹಿಸುತಿದ್ದಾರೆ. ಪುತ್ರ ಸುಜಿತ್ ಸೈಂಟ್ ಜೋಸೆಫ್ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಇನ್ನೋರ್ವ ಪುತ್ರ ಸುಚಿನ್ (ಒಂದೂವರೆ ವರ್ಷ) ಜತೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
- Friday
- November 1st, 2024