

ಕೊಡಗು ಸಂಪಾಜೆ ಗ್ರಾಮದ ಅರಮನೆತೋಟ ಎಂಬಲ್ಲಿ ವಾಸವಾಗಿರುವ ಕು. ಗೀತಾ ಹೆಚ್.ಸಿ ಎಂಬ ವಿದ್ಯಾರ್ಥಿನಿ ಕಲಿಯುವಿಕೆಯಲ್ಲಿ ಮುಂದಿದ್ದು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ. ಕೊಡಗು ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ ಈಕೆ ದ್ವಿತೀಯ ಪಿಯುಸಿ (ಕಲಾ ವಿಭಾಗ) ಪರೀಕ್ಷೆಯಲ್ಲಿ 600 ರಲ್ಲಿ 558 (93%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಪಡೆದಿರುತ್ತಾಳೆ. ಅವಳ ಸ್ವಗೃಹ ಸಂಪಾಜೆಯಲ್ಲಿ ಸೆ.6 ರಂದು ಮೊಗೇರ ಸಮಾಜದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮೊಗೇರ ಸಮಾಜದ ಗೌರವಾಧ್ಯಕ್ಷ ಹಾಗೂ ತುಳು ಅಕಾಡಮಿ ಸದಸ್ಯ ರವಿ ಪಿ.ಎಂ, ಜಿಲ್ಲಾ ಮೋಗೆರ ಸಮಾಜ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ. ಬಿ.ಶಿವಪ್ಪ, ಜಿಲ್ಲಾ ಸಮಿತಿ ಸದಸ್ಯ ಗೌತಮ್ ಶಿವಪ್ಪ, ಹಿರಿಯ ಸಲಹೆಗಾರ ಪೊಡಿಯ ಸದಸ್ಯರಾದ ರಮೇಶ್, ರಾಕೇಶ್ ಹಾಗೂ ಸಂಪಾಜೆ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಕೊರಗಪ್ಪ ಅರಮನೆತೋಟ ಹಾಗೂ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷ ಶಭರೀಶ್ ಕುದ್ಕುಳಿ ಸಂಪಾಜೆ ಹಾಗೂ ಊರಿನವರು ಮತ್ತು ವಿದ್ಯಾರ್ಥಿನಿಯ ಮನೆಯ ಸದಸ್ಯರು ಉಪಸ್ಥಿತರಿದ್ದರು.