Ad Widget

ಹಿಂದೂ ಜಾಗರಣ ವೇದಿಕೆ ಬಳ್ಪ ಘಟಕ ರಚನೆ – ಅಧ್ಯಕ್ಷರಾಗಿ ಪ್ರಖ್ಯಾತ್ ರೈ

ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಬಳ್ಪ ಘಟಕದ ರಚನೆಯು ಇಂದು ಬಳ್ಪ ವಿಕ್ರಮ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಕುಶಾಲಪ್ಪ ಗೌಡ, ಅಧ್ಯಕ್ಷರಾಗಿ ಪ್ರಖ್ಯಾತ್ ರೈ, ಉಪಾಧ್ಯಕ್ಷರಾಗಿ ಹರ್ಷಿತ್ ಪಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಪರಪ್ಪಣೆ, ಕಾರ್ಯದರ್ಶಿಗಳಾಗಿ ಗುಣಶೇಖರ ಬಳ್ಪ, ಮಹೇಶ್ ಗೆಜ್ಜೆ, ಗೋಪಾಲ ಕಲ್ಲೇರಿ, ದಯಾನಂದ , ಮತ್ತು ಸಂಪರ್ಕ ಪ್ರಮುಖರಾಗಿ ಅಜಿತ್ ಕುಲಾಲ್, ಪ್ರಚಾರ ಪ್ರಮುಖರಾಗಿ ಶಶಿಧರ್ ಎಣ್ಣೆಮಜಲು, ಹಿಂದುಯುವವಾಹಿನಿ ಪ್ರಮುಖರಾಗಿ ಸಚಿನ್ ಅಲ್ಕಬೆ, ಆಯ್ಕೆಯಾದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ನೆತ್ತರಕೆರೆ , ಉಪಾಧ್ಯಕ್ಷ ಜಯಂತ್ ಮಡಪ್ಪಾಡಿ, ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಕಾರ್ಯದರ್ಶಿ ಚಂದ್ರ ಕಲಯಿ, ಹಿಂದುಯುವವಾಹಿನಿ ಸಂಯೋಜಕ್ ಪ್ರಶಾಂತ್ ಬಿ.ಸಿ.ರೋಡ್, ರಾಷ್ಟ್ರಿಯ ಸ್ವಯಂಸೇವಕ ಸಂಘದ ಹಿರಿಯರಾದ ರಾಜಶೇಖರ್ ಹಾಗೂ ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಕೊಡಿಯಾಲ, ಪ್ರಚಾರ ಪ್ರಮುಖ್ ಚಂದು ಕೊಡಿಯಾಲ , ಮತ್ತು ಹಿಂದೂ ಜಾಗರಣ ವೇದಿಕೆ ಕೇನ್ಯ ಘಟಕದ ಅಧ್ಯಕ್ಷರಾದ ವಾಸುದೇವ ಕೆರೆಕ್ಕೋಡಿ ಉಪಸ್ಥಿತರಿದ್ದರು. ಗ್ರಾಮ ವಿಕಾಸ ಸಮಿತಿಯ ವಿನೋದ್ ಕಾರ್ಯಕ್ರಮ ನಿರೂಪಿಸಿ, ರಾಜಶೇಖರ್ ನೂತನ ಘಟಕಕ್ಕೆ ಶುಭಹಾರೈಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!