
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿನ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹಶಿಕ್ಷಕಿಯಾಗಿ ಸೇವೆಯಲ್ಲಿದ್ದ ಶ್ರೀಮತಿ ಅನಸೂಯ.ಕೆ ಪದೋನ್ನತಿ ಹೊಂದಿದ್ದು, ಇದೀಗ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಕೊಳ್ನಾಡು ಕಾಡುಮಠ ಇಲ್ಲಿಗೆ ಆಂಗ್ಲಭಾಷಾ ಶಿಕ್ಷಕಿಯಾಗಿ ಭಡ್ತಿ ಹೊಂದಿದ್ದಾರೆ. ಇವರು ಸ.ಕಿ.ಪ್ರಾಥಮಿಕ ಶಾಲೆ ಕಲ್ಪತ್ತಬೈಲು ಇಲ್ಲಿ 6 ವರ್ಷ ಹಾಗೂ ಕೆ.ಪಿ.ಎಸ್ ಬೆಳ್ಳಾರೆ(ಪ್ರಾಥಮಿಕ ವಿಭಾಗ) ಇಲ್ಲಿ 10 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಇದೀಗ ಪ್ರೌಢಶಾಲಾ ಶಿಕ್ಷಕಿಯಾಗಿ ಭಡ್ತಿಗೊಂಡಿರುತ್ತಾರೆ. ಸಾಂಸ್ಕೃತಿಕ ಹಾಗೂ ರಂಗಕಲೆಯಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಇವರು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಮಕ್ಕಳ ವಿಶಿಷ್ಟ ಸಾಧನೆಗೆ ಕಾರಣೀಕರ್ತರಾಗಿದ್ದಾರೆ. ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ,
ನಲಿ-ಕಲಿ ಸಂಪನ್ಮೂಲ ವ್ಯಕ್ತಿಯಾಗಿ, ಸ್ಕೌಟ್ ಗೈಡ್ ಚಳುವಳಿಯ ಗೈಡ್ ವಿಭಾಗದ ಶಿಕ್ಷಕಿಯಾಗಿ ವಿದ್ಯಾರ್ಥಿಗಳು ರಾಜ್ಯಪುರಸ್ಕಾರ ಪಡೆಯುವಲ್ಲಿಯೂ ಇವರ ಸೇವೆ ಅಮೋಘವಾಗಿದೆ.
ಇವರು ಬಂಟ್ವಾಳ ತಾಲೂಕಿನ ಅನಂತಾಡಿಯ ಅವಿಭಕ್ತ ಕುಟುಂಬದ ಸದಸ್ಯೆಯಾಗಿದ್ದು ಪತಿ ಶ್ರೀ ಜಗದೀಶ್. ಎಸ್ ಆಚಾರ್ಯ ಪುತ್ತೂರಿನ ಶಿವನವಮಿ ಜ್ಯುವೆಲ್ಲರ್ಸ್ ಮಾಲಕರಾಗಿದ್ದು , ಮಕ್ಕಳಾದ ಯಶಸ್.ಎಸ್.ಜೆ ಶ್ರೀರಾಮಕೃಷ್ಣ ಪ್ರೌಢಶಾಲೆ ಪುತ್ತೂರಿನಲ್ಲಿ 9ನೇ ತರಗತಿ ಹಾಗೂ ವಿಶಸ್.ಎಸ್.ಜೆ ಲಿಟ್ಲ್ ಪ್ಲವರ್ ಹಿ.ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಸಹೋದರರಾದ ಶ್ರೀ ವಿಘ್ನೇಶ್ ವಿಶ್ವಕರ್ಮ ಪುತ್ತೂರಿನ ಭಾವನಾ ಕಲಾ ಆರ್ಟ್ಸ್ ಮಾಲಕರು, ಶ್ರೀ ಮೌನೇಶ್ ವಿಶ್ವಕರ್ಮ(ಅವಳಿ ಸಹೋದರ) ಪತ್ರಕರ್ತ & ರಂಗಕರ್ಮಿ, ಶ್ರೀ ದಿನೇಶ್ ವಿಶ್ವಕರ್ಮ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯ (ಪ್ರಾಥಮಿಕ ವಿಭಾಗ ) ಚಿತ್ರಕಲಾ ಶಿಕ್ಷಕರು ಹಾಗೂ ಶ್ರೀ ಜ್ಞಾನೇಶ್ ವಿಶ್ವಕರ್ಮ ಪುತ್ತೂರಿನ ಆರ್.ವಿ ಇಂಟರ್ ಗ್ರಾಫಿಕ್ಸ್ ಮಾಲಕರು.