Ad Widget

ಅನಾರೋಗ್ಯದಿಂದ ಬಸ್ಸು ನಿಲ್ದಾಣದಲ್ಲಿ ಕುಸಿದುಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಯುವಕರು

ಗಾಂಧಿನಗರ ಬಸ್ಸುನಿಲ್ದಾಣದ ಬಳಿ ಮಡಿಕೇರಿ ಮೂಲದ ವ್ಯಕ್ತಿಯೊಬ್ಬರು ನಿನ್ನೆ ಸಂಜೆ ಐದು ಗಂಟೆಯ ವೇಳೆ ಅನಾರೋಗ್ಯದಿಂದ ಕುಸಿದುಬಿದ್ದ ಘಟನೆ ನಡೆದಿದೆ. ಇದೇ ಸಂದರ್ಭದಲ್ಲಿ ಬೇರೆ ವ್ಯಕ್ತಿಯ ಮೂಲಕ ಮಾಹಿತಿ ತಿಳಿದ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆ ಕಾರ್ಸ್ ಹಾಗೂ ಸಮಾಜಸೇವಕ ರಫೀಕ್ ಪಡು ಕೂಡಲೇ ಸ್ಥಳಕ್ಕೆ ಧಾವಿಸಿ ತಮ್ಮದೇ ಕಾರಿನಲ್ಲಿ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕಿಸುವಲ್ಲಿ ಮಾನವೀಯತೆ ಮೆರೆದಿದ್ದಾರೆ. ಇದಕ್ಕೂ ಮೊದಲು ಹಲವಾರು ಇಂತಹ ಘಟನೆಗಳಲ್ಲಿ ಇದೇ ಸದಸ್ಯರುಗಳು ಈ ರೀತಿಯ ಹಲವಾರು ರೋಗಿಗಳಿಗೆ ಸಹಾಯ ಮಾಡಿದ ಸಂದರ್ಭಗಳನ್ನು ನೆನಪಿಸಿಕೊಳ್ಳ ಬಹುದಾಗಿದೆ. ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದಿರುತ್ತಾರೆ. ಈ ಸಂದರ್ಭದಲ್ಲಿ ಮಾತನಾಡಿದ ವ್ಯಕ್ತಿಯು ನಾನು ಮೂಲತಃ ಮಡಿಕೇರಿ ನಿವಾಸಿಯಾಗಿದ್ದು ನನ್ನ ಕುಟುಂಬದ ಸದಸ್ಯರೋರ್ವರು ಜೊತೆ ಪ್ರಸ್ತುತ ಕಲ್ಲುಗುಂಡಿಯಲ್ಲಿ ವಾಸವಾಗಿದ್ದು ಕಳೆದ ಕೆಲವು ದಿನಗಳಿಂದ ಸರಿಯಾಗಿ ಕೂಲಿ ಕೆಲಸಗಳು ಇಲ್ಲದ ಕಾರಣ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರ ಸಂಬಂಧಿಕರ ದೂರವಾಣಿ ನಂಬರನ್ನು ನೀಡಿ ಮಾಹಿತಿ ನೀಡಲು ವಿಜ್ಞಾಪಿಸಿರುತ್ತಾರೆ.9972564721

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading