ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯದಲ್ಲಿದ್ದ ಲಿಂಗಪ್ಪ ಬೆಳ್ಳಾರೆಯವರು ಪದೋನ್ನತಿ ಹೊಂದಿದ್ದು, ಇದೀಗ ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿಗೆ ಆಂಗ್ಲಭಾಷಾ ಶಿಕ್ಷಕರಾಗಿ ನಿಯೋಜಿತರಾಗಿದ್ದಾರೆ. ಕ್ರೀಡೆ, ಯಕ್ಷಗಾನ, ಜೇಸೀ ವಲಯದಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಇವರು ಕಳೆದ 5 ವರ್ಷಗಳಿಂದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ (ಬಿ.ಆರ್.ಪಿ) ಸೇವೆಯಲ್ಲಿದ್ದರು. ಬೆಳ್ಳಾರೆ ದಿ.ದುಗ್ಗಪ್ಪ ಗೌಡ ಹಾಗೂ ಪರಮೇಶ್ವರಿ ದಂಪತಿಗಳ ಸುಪುತ್ರರಾದ ಇವರು ಮಡಿಕೇರಿಯ ಸರಸ್ವತಿ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್ ಶಿಕ್ಷಣವನ್ನು ಪೂರೈಸಿ, 1998ರಲ್ಲಿ ಸ.ಹಿ.ಪ್ರಾಥಮಿಕ ಶಾಲೆ ಮುಕ್ಕೂರು – ಪೆರುವಾಜೆಯಲ್ಲಿ ಶಿಕ್ಷಕರಾಗಿ ನಿಯೋಜನೆಗೊಂಡು 8 ವರ್ಷಗಳ ಸೇವೆ ಸಲ್ಲಿಸಿದರು. ತದನಂತರ ಸ.ಹಿ.ಪ್ರಾಥಮಿಕ ಶಾಲೆ ಪೆರುವಾಜೆಯಲ್ಲಿ 8 ತಿಂಗಳು, ಸ.ಹಿ.ಪ್ರಾಥಮಿಕ ಶಾಲೆ ದೇವರಕಾನದಲ್ಲಿ 8 ವರ್ಷಗಳ ಸೇವೆ ಸಲ್ಲಿಸಿದರು. ಇವರು 2003 ರಲ್ಲಿ ಜನಮೆಚ್ಚಿದ ಶಿಕ್ಷಕ, 2010 ರಲ್ಲಿ ಜೇಸೀಯ ಅತ್ಯುನ್ನತ ಪ್ರಶಸ್ತಿ ‘ಜೇಸೀ ಕಮಲಪತ್ರ’ ಹೀಗೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಪ್ರಕೃತ ಇವರು ಬೆಳ್ಳಾರೆಯಲ್ಲಿ ನೆಲೆಸಿದ್ದು, ಪತ್ನಿ ಶ್ರೀಮತಿ ಮಾಲತಿ.ಬಿ ಐವರ್ನಾಡು ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದು ಸತತ 13 ವರ್ಷಗಳ ಪ್ರಾಥಮಿಕ ವಿಭಾಗದ ಖೋ-ಖೋ ಜಿಲ್ಲಾ ಮಟ್ಟದ ಸಾಧನೆಗೆ ತರಬೇತಿ ನೀಡಿರುತ್ತಾರೆ. ಮಕ್ಕಳಾದ ನೈತಿಕಾ.ಎಲ್.ಬಿ ದ್ವಿತೀಯ ಪಿಯುಸಿ ಮುಗಿಸಿ ಪ್ಯಾರಾಮೇಡಿಕಲ್ ಕೋರ್ಸ್ ಹಾಗೂ ಕೀರ್ತಿಕ್.ಎಲ್.ಬಿ ನವೋದಯ ವಿದ್ಯಾಲಯ ಮುಡಿಪು ಇಲ್ಲಿ ಎಸೆಸ್ಸೆಲ್ಸಿ ವ್ಯಾಸಂಗ ಪೂರೈಸಿ ಮುಂದಿನ ವಿದ್ಯಾಭ್ಯಾಸಕ್ಕೆ ಅಣಿಯಾಗುತ್ತಿದ್ದಾರೆ.
- Tuesday
- November 5th, 2024