ನಗರ ಪಂಚಾಯತ್ ಕಾರು ಚಾಲಕರಾಗಿದ್ದು , ಕೋವಿಡ್ ಸೋಂಕಿತರಾಗಿ ಮೃತಪಟ್ಟ ಖಾಲಿದ್ ರವರನ್ನು ಕೊರೊನಾ ವಾರಿಯರ್ಸ್ ಆಗಿ ಪರಿಗಣಿಸಿ ಅವರ ಕುಟುಂಬಕ್ಕೆ ಸರಕಾರದಿಂದ ಸಹಾಯ ಕೊಡಿಸಲು ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಮತ್ತು ನಗರ ಪಂಚಾಯತ್ ಆಡಳಿತಾಧಿಕಾರಿ ಸುಳ್ಯ ತಹಶಿಲ್ದಾರ್ ಅನಂತಶಂಕರ್ ರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸೆ .5 ರಂದು ಮನವಿ ಸಲ್ಲಿಸಿದರು. ಕಳೆದ ನಾಲ್ಕೈದು ತಿಂಗಳುಗಳಿಂದ ನಗರ ಪಂಚಾಯತಿನ ಅಧಿಕಾರಿಗಳೊಂದಿಗೆ ಕೊರೊನಾ ವಾರಿಯರ್ಸ್ ಗಳೊಂದಿಗೆ ಸತತವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ನಗರ ಪ್ರದೇಶದ ಯಾವುದೇ ಭಾಗಗಳಲ್ಲಿ ಕೊರೋನಾ ಸೋಂಕಿಗೆ ಒಳಪಟ್ಟು ತಮ್ಮ ತಮ್ಮ ಮನೆಗಳಲ್ಲಿ ಹೊಂ ಕೋರಂಟೈನ್ ನಲ್ಲಿದ್ದ ವ್ಯಕ್ತಿಗಳಿಗೆ ಅತ್ಯವಶ್ಯಕ ವಸ್ತುಗಳನ್ನು ಪೂರೈಸುವಲ್ಲಿ ಇವರು ಮಹತ್ತರ ಪಾತ್ರವನ್ನು ವಹಿಸುತ್ತಿದ್ದರು. ಈ ನಿಟ್ಟಿನಲ್ಲಿ ಖಾಲಿದ್ ರವರಿಗೂ ಕೂಡ ಕೊರೊನ ವಾರಿಯರ್ಸ್ ಗಳಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ದ.ಕ ಜಿಲ್ಲಾ ವಕ್ಸ್ ಸಲಹಾ ಸಮಿತಿ ಸದಸ್ಯ ಹಾಜಿ ಕೆ.ಎಂ ಮುಸ್ತಫಾ , ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್ , ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ , ರಜಾಕ್ ಕೆ.ಎಂ ಜಟ್ಟಿಪಳ್ಳ , ಶಿಹಾಬ್ ಷಾ ಜಟ್ಟಿಪಳ್ಳ , ಖಾಲಿದ್ ರವರ ಕುಟುಂಬ ಸದಸ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.
- Tuesday
- November 5th, 2024