
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಟ್ಟಿಪಳ್ಳ ಇಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಗಾಯತ್ರಿ.ಕೆ ಯವರು ಪದೋನ್ನತಿ ಹೊಂದಿದ್ದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿಗೆ ಹಿಂದಿ ಶಿಕ್ಷಕಿಯಾಗಿ ನಿಯೋಜನೆಗೊಂಡಿರುತ್ತಾರೆ. ಇವರು ಸ.ಹಿ.ಪ್ರಾಥಮಿಕ ಶಾಲೆ ದೇವರಕಾನದಲ್ಲಿ 6 ವರ್ಷ ಹಾಗೂ ಸ.ಹಿ.ಪ್ರಾ.ಶಾಲೆ ಜಟ್ಟಿಪಳ್ಳದಲ್ಲಿ 7 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಇದೀಗ ಪ್ರೌಢಶಾಲಾ ಶಿಕ್ಷಕಿಯಾಗಿ ಭಡ್ತಿ ಹೊಂದಿದ್ದಾರೆ.
ಇವರು ಕನಕಮಜಲು ಗ್ರಾಮದ ಕುತ್ಯಾಳ ನಿವಾಸಿಯಾಗಿದ್ದು ಪತಿ ಶ್ರೀ ಪುರುಷೋತ್ತಮ ಕಲ್ಲಾಜೆ ಕೃಷಿಕರಾಗಿದ್ದು, ಮಕ್ಕಳಾದ ವರುಣ್ ನವೋದಯ ವಿದ್ಯಾಸಂಸ್ಥೆ ಮುಡಿಪು ಇಲ್ಲಿ ಪ್ರಥಮ ಪಿಯುಸಿ ಹಾಗೂ
ಶ್ರೀಲಕ್ಷ್ಮೀ ಸ.ಹಿ.ಪ್ರಾಥಮಿಕ ಶಾಲೆ ಕನಕಮಜಲು ಇಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.