ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಾಲ್ಕೂರು ಒಕ್ಕೂಟದ ಆಶ್ರಯದಲ್ಲಿ ಛತ್ರಪ್ಪಾಡಿಯಲ್ಲಿ ಸ್ವಾಮಿ ಕೊರಗಜ್ಜ ಪ್ರಗತಿ ಬಂಧು ಸಂಘವನ್ನು ಬಾಲಕೃಷ್ಣ ಚತ್ರಪ್ಪಾಡಿಯವರ ಮನೆಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ವಿಶ್ವನಾಥ ಚತ್ರಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಯೋಜನೆಯ ಗುತ್ತಿಗಾರು ವಲಯದ ಮೇಲ್ವಿಚಾರಕ ಸುಧೀರ್ ರವರು ಯೋಜನೆಯ ಕಾರ್ಯಕ್ರಮಗಳ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ ಹೂವಮ್ಮ, ಸಂಯೋಜಕರಾಗಿ ಯಕ್ಷಿತ್, ಕೋಶಾಧಿಕಾರಿಯಾಗಿ ಯಶೋಧ, ಸದಸ್ಯರಾಗಿ ಅನಿತಾ ಹಾಗೂ ರವಿಚಂದ್ರ ಛತ್ರಪ್ಪಾಡಿಯವರನ್ನು ಆಯ್ಕೆ ಮಾಡಲಾಯಿತು. ನಾಲ್ಕೂರು ಒಕ್ಕೂಟದ ಸೇವಾ ಪ್ರತಿನಿದಿ ಹರಿಶ್ಚಂದ್ರ ಕುಳ್ಳಂಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
- Thursday
- April 10th, 2025