2020-21 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಯಡಿ ಜೇನುಪೆಟ್ಟಿಗೆ ಹಾಗೂ ಜೇನು ಕುಟುಂಬ ಖರೀದಿಗೆ ರೂ 1600 / – ( ಶೇಕಡ 40 % ) ಸಹಾಯಧನ ಲಭ್ಯವಿದ್ದು , ಆಸಕ್ತರು ಅಧಿಕೃತ ಸಂಸ್ಥೆಯಿಂದ ಖರೀದಿಸಿ , ನಿಗದಿತ ಅರ್ಜಿ ಯೊಂದಿಗೆ ಖರೀದಿ ಮೂಲ ಬಿಲ್ , RTC , ಜಾತಿ ಪ್ರಮಾಣ ಪತ್ರ ( ಪ.ಜಾತಿ & ಪ , ಪಂಗಡ ರೈತರಿಗೆ ) , ಆಧಾರ್ , ತರಬೇತಿ ಪ್ರಮಾಣ ಪತ್ರ ( 4 ಘಟಕಕ್ಕಿಂತ ಮೇಲ್ಪಟ್ಟ ಖರೀದಿಗೆ ) , ಬ್ಯಾಂಕ್ ವಿವರಗಳನ್ನು ದಿನಾಂಕ 15.09.2020 ರೊಳಗೆ ಸಲ್ಲಿಸಿ , ಸಹಾಯಧನ ಪಡೆಯಬಹುದು. ಪ.ಜಾತಿಗೆ 100 , ಪ.ಪಂಗಡ 50 ಹಾಗೂ ಇತರೆ ರೈತರಿಗೆ 100 ಘಟಕ ಗುರಿ ಇರುತ್ತದೆ .
ಸ್ಥಿರ / ಚರ ಮಾರಾಟ ಗಾಡಿಗೆ ಸಹಾಯಧನ : 2020-21 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸ್ಥಿರ / ಚರ ಮಾರಾಟ ಗಾಡಿ ಘಟಕಕ್ಕೆ ಶೇಕಡ 50 ರಂತೆ ಗರಿಷ್ಟ 10,000 15,000 ಸಹಾಯಧನ ಲಭ್ಯವಿದ್ದು ( ತಾಲೂಕಿಗೆ 2 ಗುರಿ ) , ಆಸಕ್ತ ಗ್ರಾಮ / ಪಟ್ಟಣ / ನಗರಗಳಲ್ಲಿನ ರೈತರು , ಭೂರಹಿತ ಕಾರ್ಮಿಕರು , ಕೃಷಿ ಕೂಲಿಗಾರರು ಹಾಗೂ ತೋಟಗಾರಿಕಾ ಉತ್ಪನ್ನಗಳ ಬೀದಿ ವ್ಯಾಪಾರ ಮಾಡುವ ಚಿಲ್ಲರೆ ಮಾರಾಟಗಾರರು, ಆಧಾರ್ ಕಾರ್ಡ್ ಹಾಗು ರೇಷನ್ ಕಾರ್ಡ್ ಪ್ರತಿಯೊಂದಿಗೆ ದಿನಾಂಕ 11-09-2020 ರೊಳಗೆ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಸುಳ್ಯ ರವರ ದೂರವಾಣಿ ಸಂಖ್ಯೆ : 08257-232020 ನ್ನು ಸಂಪರ್ಕಿಸಲು ಕೋರಿದೆ .
- Tuesday
- November 5th, 2024