Ad Widget

ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರಥಮವಾಗಿ ಕೋವಿಡ್-19 ರ ಪಾಸಿಟಿವ್ ವ್ಯಕ್ತಿಯ ಸರಳ ಅಂತಿಮ ವಿಧಿವಿಧಾನ

ಸುಳ್ಯ ಗಾಂಧಿನಗರ ನಿವಾಸಿ ನಗರ ಪಂಚಾಯತ್ ಕಚೇರಿಯ ಕಾರು ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಖಾಲಿದ್ ಎಂಬುವವರು ಕಳೆದ ದಿನರಾತ್ರಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಇವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಂಡೊಯ್ಯಲಾಗಿತ್ತು. ಕೋವಿಡ್ 19 ರ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಇವರನ್ನು ಕೋವಿಡ್ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ದಿನರಾತ್ರಿ ಚಿಕಿತ್ಸೆಗೆ ಸ್ಪಂದಿಸದ ಅವರು ನಿಧನರಾದರು. ಕೋವಿಡ್ 19 ರ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಕುಟುಂಬಸ್ಥರಿಗೆ ಕೊಡುವ ವಿಷಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಕುಟುಂಬಸ್ಥರು ಸುಳ್ಯ ತಾಲೂಕು ಆಡಳಿತದ ಮುಖೇನ ಜಿಲ್ಲಾಡಳಿತಕ್ಕೆ ಮನವಿಯನ್ನು ಮಾಡಲಾಯಿತು.

. . . . .

ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತವು ಸರ್ಕಾರದ ಎಲ್ಲಾ ವಿಧಿ ವಿಧಾನಗಳನ್ನು ಮತ್ತು ನಿಯಮಾನುಸಾರವಾಗಿ ಅಂತಿಮ ಸಂಸ್ಕಾರವನ್ನು ನೆರವೇರಿಸುವ ಕಟ್ಟುನಿಟ್ಟಿನ ಕ್ರಮ ದೊಂದಿಗೆ ಕುಟುಂಬಸ್ಥರು ತಮ್ಮ ಊರಿನ ಮೊಹಲ್ಲಾದ ಮಸೀದಿ ಕಬರ್ ಸ್ಥಾನದಲ್ಲಿ ನೆರವೇರಿಸಲು ಅನುಮತಿಯನ್ನು ನೀಡಲಾಯಿತು. ಇದರಂತೆ ಇಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಸುಳ್ಯ ಮೊಗರ್ಪಣೆ ಮಸೀದಿಯ ಆವರಣಕ್ಕೆ ಮೃತ ಶರೀರವನ್ನು ತರಲಾಯಿತು. ವಾಹನದಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳೊಂದಿಗೆ ಜಿಲ್ಲಾ ಸಮಿತಿಯ ಎಸ್ ಎಸ್ ಎಫ್ ನ ಸುಮಾರು 7 ಯುವಕರ ತಂಡವು ಉಪಸ್ಥಿತರಿದ್ದರು. ಈ ವೇಳೆಗಾಗಲೇ ಸುಳ್ಯ ತಾಲೂಕು ಆಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸುಳ್ಯ ತಹಶಿಲ್ದಾರ್ ಅನಂತ ಶಂಕರ್ ರವರು ನಗರ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಡಿ, ಸುಳ್ಯ ಆರೋಗ್ಯ ಅಧಿಕಾರಿಗಳು, ಸ್ಥಳೀಯ ಮುಖಂಡರುಗಳು ಸ್ಥಳಕ್ಕೆ ಬಂದಿದ್ದರು. ಇವರ ಮುಂದಾಳತ್ವದಲ್ಲಿ ನೇತೃತ್ವದಲ್ಲಿ ಮುಂದಿನ ಅಂತಿಮ ವಿಧಿವಿಧಾನದ ಕಾರ್ಯಕ್ರಮಗಳು ಸರಳ ರೀತಿಯಲ್ಲಿ ನಡೆಯಿತು. ಸುಳ್ಯ ನಗರದ ಪ್ರದೇಶಕ್ಕೆ ಪ್ರಥಮವಾಗಿ ಕೋವಿಡ್-19 ರ ಪಾಸಿಟಿವ್ ಮೃತ ಶರೀರ ಬಂದ ಹಿನ್ನಲೆಯಲ್ಲಿ ಸ್ಥಳೀಯ ಸುಮಾರು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಕ್ಷಣಕ್ಷಣಕ್ಕೂ ಜನರನ್ನು ಎಚ್ಚರಿಸುತ್ತಿದ್ದ ಸುಳ್ಯ ತಹಶಿಸಿಲ್ದಾರ್ ಅನಂತ ಶಂಕರ್ ಹಾಗೂ ನಗರ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಡಿ ಅವರು ಹೆಚ್ಚಿನ ಜನ ಸೇರದಂತೆ ಜಾಗರೂಕತೆಯ ವಹಿಸಿದರು.

ಕೊನೆಗೂ ಸರಳ ವಿಧಿವಿಧಾನಗಳನ್ನು ಅನುಸರಿಸಿ ಅಂತ್ಯಸಂಸ್ಕಾರವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ತಹಸಿಲ್ದಾರ್ ಅವರು ಕೋವಿಡ್ 19 ರ ಬಗ್ಗೆ ಯಾರಿಗೂ ಭಯಪಡಬೇಕಾದ ಅವಶ್ಯಕತೆಯಿಲ್ಲ ಸ್ವಯಂ ಜಾಗರೂಕತೆಯನ್ನು ಪಾಲಿಸಬೇಕು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಸಮಾಜದ ಹಿತಕ್ಕಾಗಿ ಪ್ರತಿಯೊಬ್ಬರು ಶ್ರಮಿಸಬೇಕು. ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಿದರೆ ಕೊರೋಣ ಎಂಬ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಎಲ್ಲರಿಂದಲೂ ಸಾಧ್ಯ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಮೊಗರ್ಪಣೆ ಜಮಾಅತ್ ಕಮಿಟಿಯ ಅಧ್ಯಕ್ಷ ಅಬ್ದುಲ್ ಸಮದ್ ಹಾಜಿ ಮಾತನಾಡಿ ನಮ್ಮ ಜಮಾತ್ ಪರಿಸರದ ಒಬ್ಬ ವ್ಯಕ್ತಿಯ ಮೃತಶರೀರವನ್ನು ಈ ಸಂದರ್ಭದಲ್ಲಿ ನಮ್ಮ ಜಮಾತ್ ಪರಿಸರಕ್ಕೆ ತಂದು ದಫನ ಕಾರ್ಯ ನಿರ್ವಹಿಸಲು ಸಹಕರಿಸಿದ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಅದೇರೀತಿ ಜಮಾಅತಿನ ಪ್ರತಿಯೊಬ್ಬ ಸದಸ್ಯರಿಗೂ ಇದಕ್ಕೆ ಸಹಕರಿಸಿದ ಎಲ್ಲಾ ಸಂಘಟನೆಯ ವರೆಗೂ ಕೃತಜ್ಞತೆಯನ್ನು ಸಲ್ಲಿಸಿದರು . ಈ ಸಂದರ್ಭದಲ್ಲಿ ಕುಟುಂಬಸ್ಥರ ಮಹಿಳೆಯರ ರೋಧನ ಮುಗಿಲುಮುಟ್ಟಿತ್ತು. ಅಗಲಿದ ವ್ಯಕ್ತಿಯ ಪಾರ್ಥಿವ ಶರೀರಕ್ಕೆ ಚಿರಶಾಂತಿ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಎಸ್ಎಫ್ ಜಿಲ್ಲಾ ಸಮಿತಿಯ ನಾಯಕರುಗಳಾದ ನವಾಝ್ ಸಖಾಫಿ, ಕರೀಂ ಕೆದಕ್ಕಾರ್, ಸಂಸುದ್ದಿನ್ ಪಲ್ಲಿಮಜಲು, ಫೈಝಲ್ ಝೊಹರಿ ಕಲ್ಲುಗುಂಡಿ,ಹಸೈನಾರ್ ಗುತ್ತಿಗಾರು, ಅಬ್ದುಲ್ ರಹಿಮಾನ್ ಮೊಗರ್ಪಣೆ, ಸಂಶುದ್ದೀನ್ ಮೂಸಾ, ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!