ಸುಳ್ಯ ಪೈಚಾರು ಭಾಗವಾಗಿ ಸುಬ್ರಮಣ್ಯ , ಬೆಳ್ಳಾರೆಗೆ ಸಂಪರ್ಕ ಕಲ್ಪಿಸುವ ಸೋಣಂಗೇರಿ ಸಮೀಪದ ರಸ್ತೆಯೊಂದು ಭಾರಿ ದೊಡ್ಡ ಕಂದಕಕ್ಕೆ ಕುಸಿದುಬಿದ್ದಿದ್ದು ಕಳೆದ ಒಂದು ವರ್ಷಗಳಿಂದ ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಈ ವರ್ಷದ ಮಳೆಯು ಇದೀಗ ಕೊನೆಯ ಹಂತದಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯ ಹಿರಿಯರು ಸ್ಥಳ ಪರಿಶೀಲನೆಯನ್ನು ನಡೆಸಿ ಈಗಾಗಲೇ ರಸ್ತೆಯ ಮತ್ತೊಂದು ಬದಿಯಲ್ಲಿ ಬರೆಯ ಮಣ್ಣನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಗೊಳಿಸಲು ಮುಂದಾಗಿದ್ದರು. ಆದರೆ ಇದೀಗ ಒಂದು ವರ್ಷ ಕಳೆದರೂ ಕೂಡ ಕಾಮಗಾರಿಯು ನಡೆಯದೇ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಸಂಚರಿಸುವ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೇಸರಗೊಂಡ ಪೈಚಾರು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಇದರ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು ಸೆಪ್ಟೆಂಬರ್ 4ರಂದು ಸ್ಥಳಕ್ಕೆ ಭೇಟಿ ನೀಡಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸಿ ರಸ್ತೆಯನ್ನು ದುರಸ್ತಿ ಪಡಿಸಿ ಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಸಮಿತಿಯ ನಾಯಕರುಗಳಾದ ಆರ್ ಬಿ ಬಶೀರ್ ಪೈಚಾರ್, ಪ್ರಧಾನ ಕಾರ್ಯದರ್ಶಿ ಮುಜೀಬ್, ಉಪಾಧ್ಯಕ್ಷ ಅಶ್ರಫ್, ಉದ್ಯಮಿ ರಿಫಾಹಿ, ಲತೀಫ್ ಟಿ.ಎ., ಬಾತಿಷ, ಸ್ಥಳೀಯರಾದ ವಸಂತ ,ರಾಜು, ಪ್ರಶಾಂತ್, ಮೊದಲಾದವರು ಉಪಸ್ಥಿತರಿದ್ದರು.
- Tuesday
- November 5th, 2024