ಕೆಲವು ದಿನಗಳಿಂದ ಗೊಂದಲಕ್ಕೆ ಈಡಾಗಿರುವ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾದಿಂದ ನಟಿ ರಾಗಿಣಿಯವರ ಆಪ್ತ ಅರೆಸ್ಟ್ ಆಗಿರುವ ಹಿನ್ನಲೆ ರಾಗಿಣಿಯವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅನಾರೋಗ್ಯದ ಕಾರಣ ಹೇಳಿ ತಪ್ಪಿಸಿ ಕೊಳ್ಳಲು ಯತ್ನಿಸಿದ ರಾಗಿಣಿ ಮನೆಗೆ ಇಂದು ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟು ಮೊಬೈಲ್ ಹಾಗೂ ಲ್ಯಾಪ್ಟಾಪ್ ನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದರು. ಅದೇ ರೀತಿ ಮನೆಯಲ್ಲಿ ಪ್ರತಿ ಮೂಲೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವುದಾಗಿ ಗೊತ್ತಾಗುತಿದ್ದಂತೆ ನಟಿ ರಾಗಿಣಿಯವರನ್ನು ಅರೆಸ್ಟ್ ಮಾಡಲಾಗಿದೆ.
ಈ ನಡುವೆ ಸ್ಯಾಂಪಲ್ ವುಡ್ ನ ಡ್ರಗ್ಸ್ ಮಾಫಿಯಾ ದಿನದಿಂದ ದಿನಕ್ಕೆ ಬಹಳಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇನ್ನು ಯಾರ ಯಾರ ಮುಖವಾಡ ಕಳಚಲಿದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.