
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ನಿಂತಿಕ್ಕಲ್ ಶಾಖೆಯ ವತಿಯಿಂದ ಉಚಿತ ಆಯುಷ್ಮಾನ್ ನೋಂದಣಿ ಶಿಬಿರ ಎಸ್ ಎಸ್ ಎಫ್ ನಿಂತಿಕ್ಕಲ್ ಶಾಖೆಯ ಅಧ್ಯಕ್ಷರಾದ ಶರೀಫ್ ಅಂಜದಿಯವರ ಅಧ್ಯಕ್ಷತೆಯಲ್ಲಿ ಸಿರಾಜುಲ್ ಉಲೂಂ ಮದರಸ ಕಜೆ ನಿಂತಿಕ್ಕಲ್ ನಲ್ಲಿ ಜರಗಿತು. ಬದ್ರಿಯ ಜುಮಾ ಮಸ್ಜಿದ್ ಖತಿಬರಾದ ಮುಹಮ್ಮದಲಿ ಸಖಾಫಿ ದುವಾಃ ನೆರವೇರಿಸಿ,ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಸ್ತಫ ಝುಹ್ರಿ, ಇಬ್ರಾಹಿಂ ಕಜೆ, ಅಬ್ದುಲ್ಲ ಬ್ರದರ್ಸ್,ಮಹಮ್ಮದ್ , ಅಬ್ಬಾಸ್ ಕಜೆ ಅಬೂಬಕ್ಕರ್ ಕಲ್ಲೇರಿ ಹಾಗೂ ಜಮಾಹತ್ ನ ಮುಖಂಡರು ಕಾರ್ಯಕರ್ತರು ಭಾಗವಹಿಸಿದರು.
ಈ ಕಾರ್ಯಕ್ರಮವನ್ನು ಎಸ್ ಎಸ್ ಎಫ್ ಸೆಕ್ಟರ್ ಅಧ್ಯಕ್ಷರಾದ ಜಬ್ಬಾರ್ ಹನೀಫ್ ಸ್ವಾಗತಿಸಿ, ವಂದಿಸಿದರು.