ಪ್ರಧಾನಿ ನರೇಂದ್ರ ಮೋದಿಯವರ ವೈಯಯಕ್ತಿಕ ವೆಬ್ ಸೈಟ್ ಹಾಗೂ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.
ಜುಲೈ ತಿಂಗಳಲ್ಲಿ ಅನೇಕ ಗಣ್ಯರ ಟ್ವಿಟರ್ ಖಾತೆಗಳು ಹ್ಯಾಕ್ ಆಗಿದ್ದವು. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆಯೂ ಒಂದು. ಮೋದಿ ಅವರ ವೆಬ್‌ಸೈಟ್ ಖಾತೆಯ ಮೂಲಕ ನಡೆಯುತ್ತಿರುವ ಚಟುವಟಿಕೆಗಳ ಬಗೆಗೆ ಗಮನವಿದ್ದು, ಅದನ್ನು ಸುರಕ್ಷಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಸದ್ಯ ಟ್ವಿಟರ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ನಡೆಸುತ್ತಿದೆ. ಹೊಸದಾಗಿ ಯಾವುದೇ ಟ್ವಿಟರ್ ಖಾತೆಗಳು ಹ್ಯಾಕ್ ಆಗಿಲ್ಲ ಎಂದು ಟ್ವಿಟರ್ ತಿಳಿಸಿದೆ.
2.5 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯನ್ನು ಇಂದು ಮುಂಜಾನೆ 3.15 ರ ಸುಮಾರಿಗೆ ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಟ್ವೀಟರ್, ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿಸಿದೆ.