ಮಂಗಳೂರಿನ ಐಕಳದ ಪೊಂಪೈ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿರುವ ಡಾ.ಪುರುಷೋತ್ತಮ ಕೆ.ವಿ. ಕರಂಗಲ್ಲು ಇವರನ್ನು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯರಾಗಿ ನೇಮಕ ಸರಕಾರ ನೇಮಕಗೊಳಿಸಿದೆ.
ಪರಿಚಯ : ಡಾ.ಪುರುಷೋತ್ತಮ ಕೆ ವಿ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವಚಳ್ಳಿ ಗ್ರಾಮದ ಕರಂಗಲ್ಲಿನಲ್ಲಿ ದಿವಂಗತ ವೆಂಕಪ್ಪ ಗೌಡ ಮತ್ತು ದಿವಂಗತ ದುಗ್ಗಮ್ಮ ಇವರ ದ್ವಿತೀಯ ಪುತ್ರರಾಗಿ ದಿನಾಂಕ 14.02.1971 ರಲ್ಲಿ ಜನಿಸಿದರು . ತನ್ನ ಹುಟ್ಟೂರಾದ ಕರಂಗಲ್ಲು ಮತ್ತು ಸಮೀಪದ ಹರಿಹರ ಪಳ್ಳತಡ್ಕದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದುಕೊಂಡರು . ಕುಕ್ಕೆ ಸುಬ್ರಹ್ಮಣ್ಯದ ಶ್ರೀಸುಬ್ರಹ್ಮಣೇಶ್ವರ ಪಿ ಯು ಕಾಲೇಜಿನಲ್ಲಿ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪಡೆದ ಮೇಲೆ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಬಿ ಎ ಪದವಿಯನ್ನು ಪಡೆದ ಇವರು ಸಿದ್ಧವನ ಗುರುಕುಲದ ಹಳೆ ವಿದ್ಯಾರ್ಥಿಯಾಗಿದ್ದಾರೆ . 1994 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ದಲ್ಲಿ ಎರಿ ವಿ ಪದವಿಯನ್ನು ಪಡೆದ ನಂತರ ಅದೇ ವರ್ಷ ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ನೇಮಕಗೊಂಡರು . 1995 ರಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ( ಎನ್ ಇ ಟಿ ) ಮೊದಲ ಪ್ರಯತ್ನದಲ್ಲಿಯೇ ಪಾಸು ಮಾಡಿಕೊಂಡಿರುವ ಇವರು ವರ್ಗಾವಣೆಯನ್ನು ಪಡೆದು ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಶಿಕ್ಷಣ ಮಂಡಳಿಯ ಆಡಳಿತಕ್ಕೊಳಪಟ್ಟ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಹಾಗೂ ಸಂಶಫಿಲೋಮಿನಾ ಕಾಲೇಜು ಪುತ್ತೂರುಗಳಲ್ಲಿಯೂ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ , ಆ ಬಳಿಕ ವರ್ಗಾವಣೆಗೊಂಡು 2004 ರಿಂದ ಸೊಂಪೈ ಕಾಲೇಜು , ಐಕಳ ಇಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಕಾಲೇಜಿನ ಎನ್ ಸಿ ಸಿ ನೌಕಾದಳದ ಅಧಿಕಾರಿಯಾಗಿ 15 ವರ್ಷಗಳಿಂದ ಸೇವೆಯನ್ನು ಸಲ್ಲಿಸಿರುವ ಇವರು ಸುಮಾರು 15 ಕ್ಕೂ ಹೆಚ್ಚು ರಾಜ್ಯ ಹಾಗೂ ರಾಷ್ಟ್ರಮಟ್ಟದ ಶಿಬಿರಗಳಲ್ಲಿ ಅಧಿಕಾರಿಯಾಗಿ ಭಾಗವಹಿ ುತ್ತಾರೆ , 2010 ರಲ್ಲಿ ಇಂದಿರಾಗಾಂಧಿ ನ್ಯಾಷನಲ್ ಒಪನ್ ಯೂನಿವರ್ಸಿಟಿಯಿಂದ ‘ ಹೂಸ್ಟ್ ಗ್ರಾಚ್ಯವೇಟ್ ಡಿಪ್ಲೋಮ ಇನ್ ಹೈಯರ್ ಎಡುಕೇಶನ್ ಸರ್ಟಿಫಿಕೇಟನ್ನು ಪಡೆದುಕೊಂಡಿರುವ ಇವರು 2012 ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ . 2018 ರಲ್ಲಿ ಮೈನರ್ ರಿಸರ್ಚ್ ಯೋಜನೆಯಡಿಯಲ್ಲಿ ಕಿರು ಸಂಶೋಧನಾ ಪ್ರಬಂಧವನ್ನು ಮಂಡಿಸಿ ಸಂಶೋಧನಾ ಕ್ಷೇತ್ರಕ್ಕೆ ತಮ್ಮ ಮೊದಲ ಕೊಡುಗೆಯನ್ನು ಅರ್ಪಿಸಿರುವ ಇವರು ಅನೇಕ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಗಳಲ್ಲಿ ಪ್ರಬಂಧಗಳನ್ನು ಮಂಡಿಸಿರುತ್ತಾರೆ . ಇವರ ಸಂಶೋಧನಾತ್ಮಕ ಲೇಖನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ . Mangalore Universities Economics Association ಸದಸ್ಯರಾಗಿರುವುದಲ್ಲದೆ , ಕಾರಕಾರಿ ಸಮಿತಿ ಸದಸ್ಯರು ಮತ್ತು ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿರುತ್ತಾರೆ . ಪೊಂಪೈ ಕಾಲೇಜಿನ Teachers Multipurprase Cooperative Society ಯ ಉಪಾಧ್ಯಕ್ಷರಾಗಿದ್ದಾರೆ . ಮಂಗಳೂರು ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘ AMUCT ಇದರಲ್ಲಿ 2008 ರಿಂದ 2010 ಮತ್ತು 2012 ರಿಂದ 2014 ರ ಅವಧಿಯಲ್ಲಿ ಒಟ್ಟು ನಾಲ್ಕು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ . All India ManagerTient AssOACiation ( AIMA ) , YOUTH HOSTELS ASSOCIATION OF INDIA ( YHAI ) , ಮತ್ತು ದಕ್ಷಿಣಕನ್ನಡ ಜಿಲ್ಲೆ ಅಂಚೆ ಚೀಟಿ ಸಂಗ್ರಹಣೆ ಸಂಘಗಳ ಆಜೀವ ಸದಸ್ಯರಾಗಿರುತ್ತಾರೆ . ಇದರ ಆದ ಚಾರಣ , ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಣೆ ಇವರ ಹವ್ಯಾಸಗಳು . ದಿನಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿ ತನ್ನ ಲೇಖನಗಳನ್ನು ಪ್ರಕಟಿಸಿರುವ ಇವರು ‘ ಗೃಹತ್ಯಾಜ್ಯ ನಿರ್ವಹಣೆ ಮತ್ತು ಅಭಿವೃದ್ಧಿ ‘ ಎಂಬ ಹೆಸರಿನ ಒಂದು ಪುಸ್ತಕವನ್ನೂ ಪ್ರಕಟಿಸಿದ್ದಾರೆ . “ ಘನತ್ಯಾಜ್ಯ ನಿರ್ವಹಣೆಯ ಆರ್ಥಿಕ ಅಂಶಗಳು ” ಎಂಬ ವಿಷಯದ ಮೇಲೆ ಸಂಶೋಧನಾ ಕಾರಿನಡೆಸಿ 2019 ರಲ್ಲಿ ೬ ಹೆಚ್ ಡಿ ಪದವಿಯನ್ನು ಪಡೆದಿರುತ್ತಾರೆ . ಆರೆಭಾಷೆ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಅವರು 2020 ರಲ್ಲಿ ‘ ಅರೆಭಾಷೆ ಸಾಹಿತ್ಯ ಅವಲೋಕನ ‘ ಎಂಬ ಸಂಶೋಧನಾ ಪ್ರಬಂಧವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಸಲ್ಲಿಸಿರುತ್ತಾರೆ .