Ad Widget

ಶೋಷಣೆಯ ಬಂಧನದಿಂದ ಮುಕ್ತಗೊಳಿಸಿದ ಸಂತ ನಾರಾಯಣ ಗುರು


ನಾವು ಒಂದು ರೀತಿಯಲ್ಲಿ ಪುಣ್ಯವಂತರು ನಮಗ್ಯಾರಿಗೂ ನಮ್ಮೂರಿನ ಮನೆ ಯಜಮಾನನ ತೋಟದಲ್ಲಿ ಬಿದ್ದ ಹಾಳೆಯನ್ನು ಹೆಕ್ಕಿ ತಂದು ಅದರಲ್ಲಿ ಅನ್ನ ಕೊಟ್ಟ ಅನುಭವ ಆಗಿರಲಿ ತೆಂಗಿನ ಗೆರಟೆಯಲ್ಲಿ ನೀರು ಕುಡಿದ ಅನುಭವ ಆಗಿರಲಿ ನಮ್ಮ ಅನುಭವಕ್ಕೆ ಬರುವುದು ಕೂಡ ಕಷ್ಟ ಈ ಕಾಲದಲ್ಲಿ. ಇಷ್ಟಕ್ಕೆ ಮುಗಿಯಲಿಲ್ಲ ಒಂದು ಕಾಲದಲ್ಲಿ ದೇವಸ್ಥಾನ ಪ್ರವೇಶ ಅನ್ನೋದು ಕನಸಿನ ಮಾತು ಬಾವಿ ಕಟ್ಟೆ ಮುಟ್ಟೊದೆ ದೊಡ್ಡ ಅಪರಾದ. ಈ ಎಲ್ಲಾ ಅವಮಾನಗಳಿಂದ ಮುಕ್ತಿ ಸಿಗಬೇಕಾದರೆ ಕೊನೆಗೂ ನಾರಾಯಣ ಗುರುಗಳೆ ಬರಬೇಕಿತ್ತು . ನಾರಾಯಣ ಗುರುಗಳು ಜನಿಸಿದ್ದು ಕೇರಳದಲ್ಲಿ ತಂದೆ ಮದನ್ ಅಸನ್ ತಾಯಿ ಕುಟ್ಟಿ ಅಮ್ಮಾಳ್ ದಂಪತಿಗಳಿಗೆ ಜನಿಸಿದ ಇವರು. ಕೇರಳದಲ್ಲಿ ಅವತ್ತಿನ ಕಾಲದಲ್ಲಿ ಮೇಲ್ವರ್ಗ ಕೆಳವರ್ಗ ಅನ್ನುವ ತಾರತಮ್ಯ ಒಂದು ಕಡೆ ಆದರೆ ಬಹುತೇಕ ದೇವಸ್ಥಾನಗಳಿಗೆ ಪ್ರವೇಶಗಳೆ ಇರಲಿಲ್ಲ .ಇಷ್ಟು ದೊಡ್ಡ ಪ್ರಮಾಣದಲ್ಲಿ ಶೋಷಣೆ ನಡೆಯುತ್ತಿದ್ದ ಆ ಕಾಲ ಘಟ್ಟದಲ್ಲಿ ಇದರ ವಿರುದ್ಧ ಯಾವುದೆ ರಕ್ತಪಾತದ ಚಳುವಳಿಯನ್ನು ಮಾಡದೆ ಸ್ವತಃ ತಾವೆ ದೇವಸ್ಥಾನಗಳನ್ನು ನಿರ್ಮಿಸಿ ಶಿವನ ವಿಗ್ರಹಗಳನ್ನು ನಾರಾಯಣಗುರುಗಳೆ ಪ್ರತಿಷ್ಠಾಪನೆ ಮಾಡಿದರು. ಆ ಮೂಲಕ ದೇವಸ್ಥಾನದೊಳಗೆ ಎಲ್ಲಾ ವರ್ಗದ ಜನರಿಗೂ ಮುಕ್ತ ಪ್ರವೇಶ ಸಿಗುವಂತೆ ಮಾಡಿದರು. ಹೀಗೆ ಒಮ್ಮೆ ನಾರಾಯಣ ಗುರುಗಳ ಬಳಿ ಒಬ್ಬರು ಪ್ರಶ್ನೆ ಕೇಳಿದರು. ‘ನೀವೂ ಶೂದ್ರರು ನೀವೂ ದೇವರ ವಿಗ್ರಹ ಪ್ರತಿಷ್ಠಾಪಿಸಿದ್ದು ತಪ್ಪು ವಿಗ್ರಹ ಮೈಲಿಗೆ ಆಗಲಿಲ್ಲವೆ’ ಅದಕ್ಕೆ ಅವರು ನಗುತ್ತಲೇ ಉತ್ತರಿಸಿದರು. ‘ಹೌದು ನಾವು ಶಿವನನ್ನು ಪ್ರತಿಷ್ಠಾಪನೆ ಮಾಡಿದ್ದೇವೆ ನಾವೂ ಶೂದ್ರರು ನಮ್ಮ ಶಿವನು ಶೂದ್ರನೆ ಹಾಗಾಗಿ ನಮ್ಮ ಶಿವ ಶೂದ್ರ ಶಿವ’ ಅಂತ ಉತ್ತರಿಸಿದರು ನಾರಾಯಣ ಗುರುಗಳು ಶೋಷಿತ ಸಮಾಜದಲ್ಲಿ ಬೆಳಕಾಗಿ ಪರಿವರ್ತನೆಗೆ ಹೊಸ ಮುನ್ನುಡಿ ಬರೆದ ಸಂತ . ಇವತ್ತು ಅವರ 166 ನೇ ಜಯಂತಿ ಹಿಂದೂ ಸಮಾಜ ಜಾತಿ ಮೇಲು ಕೀಳು ಎಂಬ ಎಲ್ಲಾ ದುಷ್ಟ ಬಂಧನದಿಂದ ಹೊರಬಂದು ಒಂದೆ ದಿಕ್ಕಿನಲ್ಲಿ ಸಾಗಲಿ. ಸಾಮಾಜಿಕ ಪರಿವರ್ತನೆಯು ನಾರಾಯಣ ಗುರುಗಳ ಕನಸು ನನಸು ಮಾಡಲಿ.

. . . . . .


📝📝📝📝 ಕೇಶವ ಆರ್ಯ ಪೆರುವಾಜೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!