ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಸದಸ್ಯರಾಗಿ ಭರತೇಶ ಅಲಸಂಡೆಮಜಲು ಇವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ.
ಪರಿಚಯ : ಇವರು ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಅಲಸಂಡೆಮಜಲು ಮನೆ ಬೋಜಪ್ಪ ಎ ಹಾಗೂ ಗಿರಿಜಾ ಎ ಬಿ. ದಂಪತಿಗಳ ಪುತ್ರ. ಮಂಗಳೂರಿನ ವಾಮಂಜೂರು ಜೋಸೆಫ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿರುತ್ತಾರೆ. ಮಂಗಳೂರು ವಿಶ್ವವಿದ್ಯಾಲಯದ ಸಂಧ್ಯಾ ಕಾಲೇಜಿನಲ್ಲಿ ತುಳು ಎಂ.ಎ ಯಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಬ್ಯಾಂಕ್ ಅಫ್ ಬರೋಡ ಮಂಗಳೂರಿನ ವಲಯ ಕೇಂದ್ರ ಕಛೇರಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಸುಳ್ಯ, ಪುತ್ತೂರು ಅಸುಪಾಸುಗಳಲ್ಲಿ ನಡೆಯುವ ಆಚರಣೆ, ಆರಾಧನೆ, ವಸ್ತು, ಊರು, ಸಂಸ್ಥೆಗಳ ಬಗೆಗೆ ಮಾಹಿತಿ ಸಂಗ್ರಹಿಸಿ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ. ನಿರಂತರ ರೇಡಿಯೊ ಕೇಳುವರು ಹೌದು ಜೊತೆಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಕರಾವಳಿ, ತುಳು ತಿಂಗಳು, ಇಲ್ಲಿನ ಅಚರಣೆಗಳ ಬಗೆಗೆ ಅಧ್ಯಯನತ್ಮಾಕ ಬರಹಗಳನ್ನು ಬರೆದಿದ್ದಾರೆ. ಪ್ರಸ್ತುತ ಇನ್ಕ್ಯೂಬೆಟರ್ ಹಂತದಲ್ಲಿರುವ ತುಳು ವಿಕ್ಷನರಿಯಲ್ಲಿ ತುಳು ಸಬ್ದಗಳ ಸಂಗ್ರಹ ಕಾರ್ಯವನ್ನು ಮಾಡುತ್ತಿದ್ದಾರೆ.
ಪತ್ರಿಕೆಗಳಿಗೆ ಲೇಖನ, ಕವನ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅರೆಭಾಷೆಯ ಬಗೆಗೆ ವಿಶೇಷ ಒಲವು ಹೊಂದಿದವರಾಗಿದ್ದು ಅರೆಭಾಷೆ ಪದ, ಇಲ್ಲಿನ ಜೀವನ ಅವರ್ತನ ಕ್ರಮ, ಸ್ಥಳನಾಮ, ಆಚರಣೆಗಳ ಭಿನ್ನತೆಗಳ ಬಗ್ಗೆ ತಿಳಿದುಕೊಳ್ಳುವತ್ತಾ ಅಸಕ್ತಿವಹಿಸುತ್ತಿದ್ದಾರೆ. ಪ್ರವಾಸ, ಪರ್ವತಾರೋಹಣ, ಪೋಟೋಗ್ರಾಫಿ ,ಡೊಕ್ಯೂಮೆಂಟರಿ ರಚಿಸುವುವ ಇವರ ಇಷ್ಟದ ಕ್ಷೇತ್ರ. ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ನ ಸಕ್ರಿಯ ಸದಸ್ಯರು ಅಗಿದ್ದಾರೆ.
- Friday
- November 1st, 2024