ಎಸ್ ವೈಎಸ್ ಪಂಜ ನೆಕ್ಕಿಲ ಬ್ರಾಂಚ್ ಹಮ್ಮಿಕೊಂಡ ಸಂಘಟನಾ ಕಾರ್ಯಾಗಾರದಲ್ಲಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಎಸ್ ವೈಎಸ್ ರಾಜ್ಯ ಸಮಿತಿಯ ಸಾಂತ್ವನ ವಿಭಾಗದ ಚೇರ್ಮೆನ್ ಜಿ ಎಮ್ ಉಸ್ತಾದರು ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಹುಟ್ಟು ಹಾಕುವವರು ಎಸ್ ವೈಎಸ್ , ಎಸ್ಸೆಸ್ಸೆಫ್ ಕಾರ್ಯಕರ್ತರಾಗಬಾರದು ಎಂದು ಕಾರ್ಯಕರ್ತರಿಗೆ ಮನದಟ್ಟು ಮಾಡಿದರು.
ಪ್ರಸ್ತುತ ಆನ್ ಲೈನ್ ಶಿಬಿರದ ಸಭಾಧ್ಯಕ್ಷತೆಯನ್ನು ನೆಕ್ಕಿಲ ಬ್ರಾಂಚ್ ಅಧ್ಯಕ್ಷ ಇಬ್ರಾಹಿಮ್ ಮುಸ್ಲಿಯಾರ್ ರವರು ವಹಿಸಿದ್ದರು. ಅಬ್ದುಲ್ ಹಮೀದ್ ಸಅದಿ ಯವರು ಪ್ರಾರ್ಥನೆಗೈಯುವ ಮೂಲಕ ಚಾಲನೆ ನೀಡಿದರು. ನೆಕ್ಕಿಲ ಜಮಾಅತ್ ಖತೀಬ್ ಉಸ್ತಾದ್ ಝೀಯಾದ್ ಸಖಾಫಿ ರವರು ಉದ್ಘಾಟಿಸಿದರು. ನೂರುದ್ದೀನ್ ಝುಹ್ರಿ, ಹಸನ್ ಸಖಾಫಿ ಬೆಳ್ಳಾರೆ, ಸುಲೈಮಾನ್ ಸಖಾಫಿ ಎಣ್ಮೂರು, ದಾವೂದ್ ಮಾಸ್ಟರ್, ಹೈದರಲೀ ಐವತ್ತೊಕ್ಲು ಮೊದಲಾದವರು ಸಾಂದರ್ಭಿಕ ವಾಗಿ ಮಾತನಾಡಿದರು. ಪ್ರದಾನ ಕಾರ್ಯದರ್ಶಿ ಉಮರ್ ಸೀಗೆಯಡಿ ಸ್ವಾಗತಿಸಿ, ಝಕರಿಯಾ ಸಖಾಫಿ ವಂದಿಸಿದರು. ಖಲೀಲ್ ಝುಹ್ರಿ ನಿರೂಪಿಸಿದರು.
- Thursday
- April 3rd, 2025