- Saturday
- April 19th, 2025

ಸಾಲಮನ್ನಾಕ್ಕಾಗಿ ಹಾಗೂ ಲಾಕ್ ಡೌನ್ ಸಂತ್ರಸ್ಥ ಬಡವರಿಗೆ ಪರಿಹಾರ ನೀಡಲು ಆಗ್ರಹಿಸಿ ಮತ್ತು ಸಾಲ ವಸೂಲಿಗಾರರ ದಬ್ಬಾಳಿಕೆ ವಿರುದ್ದ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ ಜೂ 25ರಂದು ಪುತ್ತೂರು ಮಿನಿ ವಿಧಾನಸೌಧ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಋಣಮುಕ್ತ ಅನುಷ್ಠಾನ ಹೋರಾಟ ಸಮಿತಿಯ ಅಧ್ಯಕ್ಷ ಬಿ ಎಂ ಭಟ್ ಕರೋನವೈರಸ್...

ಕೊರೋನ ವೈರಸ್ ವಿಷಯದಲ್ಲಿ ನಿಶ್ಚಿಂತೆಯಿಂದ ಇದ್ದ ಕೊಡಗಿನ ಜನತೆ ಇದೀಗ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಜೂನ್ 24 ಬುಧವಾರದಂದು ಒಂದೇ ದಿನ 14 ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು ಕೊರೋನ ಅಟ್ಟಹಾಸಕ್ಕೆ ಮಂಜಿನನಗರಿ ಕೊಡಗು ತತ್ತರಿಸಿಹೋಗಿದೆ.ಇದರಿಂದಾಗಿ ಮಡಿಕೇರಿಯ ಎರಡು ಪ್ರಮುಖ ಬಡಾವಣೆ ಸೀಲ್ ಡೌನ್ ಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.

ಕೊರೋನಾ ಮಹಾಮಾರಿ ವೈರಸ್ಸಿನ ಹಿನ್ನೆಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಲವಾರು ರೀತಿಯ ಗೊಂದಲಗಳ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಬೇಕು ಬೇಡ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿತ್ತು. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಹಲವಾರು ಸವಾಲುಗಳನ್ನು ಎದುರಿಸಿ ಕೊನೆಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಹೆಜ್ಜೆಯನ್ನು ಇಟ್ಟಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಕರ್ನಾಟಕ ರಾಜ್ಯದಾದ್ಯಂತ ಸುತ್ತಿ...

ಕೊರೊನದಿಂದಾಗಿ ತೂಗುಯ್ಯಲೆಯಲ್ಲಿದ್ದ ಪರೀಕ್ಷೆಗೆ ಇಂದು ಮುಹೂರ್ತ ಕೂಡಿಬಂದಿದೆ. ಜೂ. 25 ರಿಂದ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಪೋಷಕರಿಗೆ ಅಗ್ನಿ ಪರೀಕ್ಷೆಯೇ ಆಗಿದೆ. ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಿದ್ದರೂ ಪೋಷಕರ ಭಯ ಕಡಿಮೆಯಾಗಬೇಕಾದರೇ ಯಶಸ್ವಿಯಾಗಿ ಪರೀಕ್ಷೆ ಮುಗಿಯಬೇಕಷ್ಟೆ. ಸರಕಾರ ಬಸ್ ಗಳ ವ್ಯವಸ್ಥೆ ಮಾಡಿದೆಯಾದರೂ ಮಕ್ಕಳು ಅಂತರ ಕಾಪಾಡುವಿಕೆ ಬಗ್ಗೆ...

ಜೂ.14 ರಂದು ನಿಧನರಾದ ಸುಳ್ಯ ಪರಿವಾರ ನಿವಾಸಿ ಜನಮೆಚ್ಚಿದ ಶಿಕ್ಷಕ ದಿ.ಮೊರಂಗಲ್ಲು ಪಿ.ಪದ್ಮನಾಭ ರೈಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮವು ಜೂ.24 ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ನ ಗ್ರಾಂಡ್ ಪರಿವಾರ್ ಸಭಾಂಗಣದಲ್ಲಿ ಜರುಗಿತು . ಮೃತರಿಗೆ ಎಣ್ಣೂರುಗುತ್ತು ಪಟ್ಟೆ ಪ್ರಭಾಕರ ರೈ ಯವರು ನುಡಿ ನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಮೃತರ ಪತ್ನಿ...

ಗುತ್ತಿಗಾರು ಶ್ರೀ ದುರ್ಗಾ ತರಭೇತಿ ಕೇಂದ್ರದಲ್ಲಿ ನವೋದಯ ಮತ್ತು ಮೊರಾರ್ಜಿ ಶಾಲೆಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಸಂಪಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೈ ಕೆ ಮಾಲತಿ ಹಾಗೂ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಮೋಹನ್ ದಾಸ್ ದಂಪತಿಗಳು, ಶ್ರೀ ದುರ್ಗಾ ತರಭೇತಿ ಕೇಂದ್ರದಲ್ಲಿ ತರಭೇತಿ ಪಡೆದು ನವೋದಯ ಹಾಗೂ ಮೊರಾರ್ಜಿ ಶಾಲೆಗೆ...

ಋಣಮುಕ್ತ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಜೂ.೨೫ ರಂದು ಬೆಳಿಗ್ಗೆ 10-30 ಗಂಟೆಗೆ ಪುತ್ತೂರು ಎಸಿ ಕಚೇರಿ ಮಿನಿವಿಧಾನ ಸೌದದ ಎದುರು ಪ್ರತಿಭಟನೆ ನಡೆಯಲಿದೆ. ಈ ವೇಳೆ ಸಾಲಮನ್ನಾ, ಲಾಕ್ ಡೌನ್ ಸಂತ್ರಸ್ಥ ಬಡವರಿಗೆ ಪರಿಹಾರ ಆಗ್ರಹಿಸಿ ಮತ್ತು ಸಾಲ ವಸೂಲಿಗಾರರ ದಬ್ಬಾಳಿಕೆ ವಿರುದ್ದ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ . ಆದುದರಿಂದ ಸಾಲಮಾಡಿ ಸಂಕಷ್ಟದಲ್ಲಿರುವ ಸಂತ್ರಸ್ಥ...

ಹಾಸನಡ್ಕ ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಜಯಲಕ್ಷ್ಮಿ ಜಿ. ಜೂ 30 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಅವರು ಒಟ್ಟು29 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ. ಬಂಟ್ವಾಳ ದ ಶಿವನಗರ ಶಾಲೆ ವೃತ್ತಿ ಆರಂಭಿಸಿ 2 ವರ್ಷ ಸೇವೆ ಸಲ್ಲಿಸಿದರು. ನಂತರ ಬೆಳ್ಳಾರೆಯಲ್ಲಿ 10 ವರ್ಷ ಸೇವೆ ಸಲ್ಲಿಸಿ ಹಾಸನಡ್ಕಕ್ಕೆ ವರ್ಗಾವಣೆಗೊಂಡಿದ್ದರು. ಹಾಸನಡ್ಕ ದಲ್ಲಿ ಸುಧೀರ್ಘ 17 ವರ್ಷ...

ನವದೆಹಲಿ ಎಲ್ಲ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ . ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಈ ವಿಷಯ ತಿಳಿಸಿದ್ದಾರೆ . ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯವಾಗುವ ಆರ್‌ಬಿಐ ಮೇಲ್ವಿಚಾರಣಾ ಪ್ರಕ್ರಿಯೆಯಡಿ ನಗರ ಸಹಕಾರಿ ಬ್ಯಾಂಕುಗಳು...

ಕೊರೋನ ಮಹಾಮಾರಿ ಬರುಬರುತ್ತಾ ಪೊಲೀಸ್ ಠಾಣೆಗಳಿಗೆ ದಾಳಿ ಮಾಡಲಾರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಠಾಣಾ ಪೊಲೀಸ್ ಅಧಿಕಾರಿ ಅವರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ.ಜಿಲ್ಲೆಯಲ್ಲಿ ಕೋರೋಣ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಂದು ಉಳ್ಳಾಲದ ವೃದ್ಧೆಯೊಬ್ಬರು ಕೊರೋನಾ ಮಹಾಮಾರಿ ಯಿಂದ ಮೃತರಾಗಿದ್ದಾರೆ. ಸೋಂಕಿತರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು...

All posts loaded
No more posts