ಟಿಕ್ ಟಾಕ್ ಬ್ಯಾನ್- ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ದಿಟ್ಟ ನಿರ್ಧಾರ
ಭಾರತೀಯರ ಹಲವು ವರ್ಷಗಳ ಬೇಡಿಕೆಯನ್ನು ಕೇಂದ್ರ ಸರಕಾರ ಈಡೇರಿಸಿದ್ದು ಟಿಕ್ ಟಾಕ್ ಸೇರಿದಂತೆ 59 ಆ್ಯಪ್ ಗಳನ್ನು ಬ್ಯಾನ್ ಮಾಡಿ ಮಾಡಿದೆ
ಪಾಕಿಸ್ತಾನ ಮಾಡುತ್ತಿರುವ ಉಗ್ರ ಚಟುವಟಿಕೆಗಳಿಗೆ ಚೀನಾ ಸದಾ ಬೆಂಬಲ ನೀಡಲಾರಂಭಿಸಿದ ಬಳಿಕ ಭಾರತೀಯರ ದೇಶಾಭಿನಾನಿಗಳ ಪ್ರಮುಖ ಬೇಡಿಕೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಂದೋಲನ ನಡೆಯುತ್ತಲೇ ಇತ್ತು. ಇತ್ತೀಚೆಗೆ ಚೀನಾ ನಡೆಸಿದ ಕುಂತಂತ್ರಕ್ಕೆ ನಮ್ಮ ಯೋಧರು ಬಲಿಯಾದ ಮೇಲಂತೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಗಮನಹರಿಸಿದ ಕೇಂದ್ರ ಮಾಹಿತಿ ವಿವಿಧ ಕಾರಣ ನೀಡಿ ಈ 59 ಆ್ಯಪ್ ಗಳ ಬ್ಯಾನ್ ಮಾಡಿದೆ. ಟಿಕ್ ಟಾಕ್,ವಿ ಚಾಟ್, ಯುಸಿ ಬ್ರೌಸ್,ಶೇರ್ ಇಟ್ ಪ್ರಮುಖವಾಗಿವೆ.
ಈ ಆ್ಯಪ್ ಮೂಲಕ ಭಾರತದ ದತ್ತಾಂಶ,ಭಾರತೀಯರ ಖಾಸಗೀತನ ಚೀನಾಕ್ಕೆ ಲಭ್ಯವಾಗುತ್ತಿದ್ದ ಇದರಿಂದ ರಾಷ್ಟೀಯ ಗೌಪ್ಯತೆ ಹಾಗೂ ಭದ್ರತೆಯ ಧೃಷ್ಟಿಯಿಂದ ಬ್ಯಾನ್ ಮಾಡಲಾಗುವುದು ಎಂದು ಸರಕಾರ ಹೇಳಿದೆ. ಕೆಲ ದಿನಗಳ ಹಿಂದೆ ಕೇಂದ್ರ ಗುಪ್ತಚರ ಇಲಾಖೆ ಈ ಅ್ಯಪ್ ಗಳನ್ನು ಬಳದಂತೆ ಸೂಚನೆ ನೀಡಿ ಇದಕ್ಕೆ ಪರ್ಯಾಯ ಅ್ಯಪ್ ಗಳ ಬಗ್ಗೆ ಮಾಹಿತಿ ನೀಡಿತ್ತು. ಈ ಮೂಲಕ ಚೀನಾ ಕುತಂತ್ರಕ್ಕೆ ಬಲಿಯಾದ ಹುತಾತ್ಮ ಯೋಧರಿಗೆ ಸರಕಾರ ಶ್ರದ್ದಾಂಜಲಿ ಸಲ್ಲಿಸಿದೆ.
- Wednesday
- November 6th, 2024