ಸುಳ್ಯದ ಹೆಸರಾಂತ ಹೋಟೆಲ್ ದ್ವಾರಕ ಸೀಲ್ ಡೌನ್ ಆಗಿದೆ ಎಂಬ ವದಂತಿ ಹರಿದಾಡುತ್ತಿದ್ದು, ಈ ವದಂತಿಯನ್ನು ಆರೋಗ್ಯ ಇಲಾಖೆ ಹಾಗೂ ಹೋಟೆಲ್ ಮಾಲಕರು ನಿರಾಕರಿಸಿದ್ದಾರೆ. ದಯವಿಟ್ಟು ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಸುಳ್ಯದ ದ್ವಾರಕ ಹೋಟೆಲ್ ನಲ್ಲಿರುವ ಕೆಲಸದ ವ್ಯಕ್ತಿಗೆ ಕೊರೊನಾ ಸೋಂಕು ಬಂದಿದೆಯಂತೆ, ಮಂಗಳೂರಿಗೆ ಕರೆದೊಯ್ದಿದ್ದಾರಂತೆ ಹೋಟೆಲ್ ಸೀಲ್ ಡೌನ್ ಆಗಿದೆಯಂತೆ ಎಂಬ ಸುಳ್ಳು ವದಂತಿ ಹಬ್ಬಿದೆ.
ಈ ಕುರಿತು ಹೋಟೆಲ್ ಮಾಲಕರನ್ನು ಸಂಪರ್ಕಿಸಿ ವಿಚಾರಿಸಿದಾಗ “ನಮ್ಮಲ್ಲಿ ಯಾರಿಗೂ ಸೋಂಕು ಇಲ್ಲ. ನಮಗೂ ಕೆಲವರು ಫೋನ್ ಮಾಡಿ ಕೇಳಿದ್ದಾರೆ. ಯಾರೋ ಸುಮ್ಮನೆ ಸುಳ್ಳು ಸುದ್ದಿ ಹರಡುತ್ತಿದ್ದಾರಷ್ಟೆ. ನಾವು ಹೋಟೆಲ್ ಹಾಗೂ ತರಕಾರಿ ಅಂಗಡಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.
ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ರನ್ನು ಸಂಪರ್ಕಿಸಿ ವಿಚಾರಿಸಿದಾಗ “ದ್ವಾರಕದ ಯಾರಿಂದಲೂ ಸ್ಯಾಂಪಲ್ ತೆಗೆದೇ ಇಲ್ಲ. ಮತ್ತು ಹೋಟೆಲ್ ಸೀಲ್ ಡೌನ್ ವಿಚಾರವೇ ಇಲ್ಲ. ಹಾಗಿದ್ದರೆ ನಮಗೆ ತಿಳಿದ ಬಳಿಕವೇ ಮಾಡಬೇಕಾಗುತ್ತದೆ. ಇದರೊಂದಿಗೆ ಸುಳ್ಯದಲ್ಲಿ ಇನ್ನೂ 14 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ.ಈ ರೀತಿಯ ಸುಳ್ಳು ಸುದ್ದಿಯನ್ನು ಹರಡಿ ಸಮಾಜದ ನೆಮ್ಮದಿಯನ್ನು ಹಾಳು ಮಾಡಬಾರದು ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
- Monday
- November 25th, 2024