
ಸುಳ್ಯದಲ್ಲಿ ನಾಲ್ಕು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು , ಈ ಪೈಕಿ ಗರ್ಭಿಣಿ ಮಹಿಳೆಯಲ್ಲಿ ಕೂಡ ಸೋಂಕು ಇರುವುದು ಆತಂಕ ಉಂಟುಮಾಡಿದೆ.
ಕನಕಮಜಲು ಸಮೀಪದ ಸುಣ್ಣಮೂಲೆಯ ಗರ್ಭಿಣಿ ಮಹಿಳೆಗೆ ಹೆರಿಗೆಯಾದ ಬಳಿಕ ಸೋಂಕು ದೃಢಪಟ್ಟಿದೆ. ಸೋಣಂಗೇರಿಯ ವೃದ್ಧ, ಐವರ್ನಾಡಿನ ಇಬ್ಬರು ಯುವಕರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಇವರೆಲ್ಲರಿಗೆ ಸಂಪರ್ಕ ಆಧಾರದಲ್ಲಿ ಸೋಂಕು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.