ಕಟ್ಟೆಕ್ಕಾರ್ ಬಳಿ (ಚೆನ್ನಕೇಶವ ದೇವಸ್ಥಾನ ರಸ್ತೆ)ಯ ಈ ಹಿಂದೆ ಚರಂಡಿಯಲ್ಲಿ ಇರುವ ನೀರಿನ ಪೈಪು ಒಡೆದು ಕುಡಿಯುವ ನೀರು ತ್ಯಾಜ್ಯ ನೀರಿನೊಂದಿಗೆ ಹರಿಯುತ್ತಿರುವ ಬಗ್ಗೆ ದೂರು ನೀಡಿ ತಕ್ಷಣ ಪಂಚಾಯತ್ ಸಿಬ್ಬಂದಿ ದುರಸ್ತಿ ಪಡಿಸಿದ್ದು ಕೆಲವೇ ಕ್ಷಣದಲ್ಲಿ ಮತ್ತೇ ಮೊದಲಿನಂತೆ ಆಗಿದ್ದು, ಈಗ ಪಂಚಾಯತು ಸಲಕರಣೆ ಮತ್ತು ತಜ್ಞರು ಹಾಸನದಿಂದ ಬಂದು ದುರಸ್ತಿ ಮಾಡಲಿದ್ದಾರೆಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇಷ್ಟು ಸಣ್ಣ ಕಾಮಗಾರಿಗೆ ಸುಳ್ಯ ನ.ಪಂನಲ್ಲಿ ತಜ್ಞ ಇಂಜಿನಿಯರ್ ಇಲ್ಲದೇ ಇರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ತಕ್ಷಣ ಸೂಕ್ತ ಅಧಿಕಾರಿಗಳು ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಪಂಚಾಯತಿನ ನಿರ್ಲಕ್ಷ್ಯ ಖಂಡನೀಯ ಎಂದು ಆರ್.ಟಿ ಕಾರ್ಯಕರ್ತ ಡಿ.ಯಂ ಶಾರೀಖ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
- Wednesday
- November 6th, 2024