ದಕ್ಷಿಣಕನ್ನಡ – ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಮೈಸೂರು – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಕಲ್ಲಾಳ ಅರೆಕಲ್ಲು ಎರಡು ಉಪ ಗ್ರಾಮದೊಂದಿಗೆ ಸಂಪಾಜೆ 750 ಮನೆಗಳೊಂದಿಗೆ ಒಟ್ಟು 3400 ಜನಸಂಖ್ಯೆ ಹೊಂದಿದ್ದು, ಹೋಬಳಿ ಮಟ್ಟದ, ವಿವಿಧ ಇಲಾಖೆಗಳಿದ್ದು, ಗ್ರಾಮದಲ್ಲಿ ಅಂಗನವಾಡಿ, ಆರಕ್ಷಕ ಠಾಣೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪ್ರವಾಸಿ ಮಂದಿರ, ಪಶು ವೈದ್ಯಕೀಯ ಕೇಂದ್ರ, ಆಸ್ಪತ್ರೆ, ಸರಕಾರಿ ಶಾಲೆ, ಸಹಕಾರಿ ಸಂಘದ ಪ್ರಧಾನ ಕಛೇರಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ.
ಕೊಡಗು ಸಂಪಾಜೆ ಗ್ರಾಮ ಪಂಚಾಯಿತ್ 2015 ರಿಂದ 2020 ರ ವರೆಗಿನ ಆಡಳಿತ ಮಂಡಳಿಯಲ್ಲಿ 8 ಜನ ಸದಸ್ಯರಿಂದ ಪ್ರಾರಂಭದಲ್ಲಿ ಮೂರುವರೆ ವರ್ಷಗಳ ಕಾಲ ಶ್ರೀಯುತ ಬಾಲಚಂದ್ರ ಕಳಗಿಯವರು ಅಧ್ಯಕ್ಷರಾಗಿ ಗ್ರಾಮದ ಅಭಿವೃದ್ಧಿಯ ಹರಿಕಾರರಾಗಿ ಸಂಪಾಜೆ ಗ್ರಾಮ ಪಂಚಾಯಿತ್ ರಾಷ್ಟ್ರ ಪ್ರಶಸ್ತಿ ಪಡೆಯುವಲ್ಲಿ ಸಾಧನೆ ಮಾಡಿದರು. ಶ್ರೀಯುತ ಬಾಲಚಂದ್ರ ಕಳಗಿಯವರ ಆಕಾಲಿಕ ಮರಣ ನಂತರ ಶ್ರೀ ಕುಮಾರ್ ಚೆದ್ಕಾರ್ ಪಂಚಾಯತ್ ಅಧ್ಯಕ್ಷರಾಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವಹಿಸಿಕೊಂಡು ಸಂಪಾಜೆ ಗ್ರಾಮ ಪಂಚಾಯತ್ ಆಡಳಿತ ಕಚೇರಿಯ ಮೇಲು ಅಂತಸ್ತಿನಲ್ಲಿ ಸುಂದರವಾದ ಸಭಾಭವನ ನಿರ್ಮಿಸಲಾಯಿತು ಅಲ್ಲದೆ ಸಂಸದರು, ಶಾಸಕರು, ಜಿಲ್ಲಾ ಪಂಚಾಯತ್, ತಾಲೋಕು ಪಂಚಾಯತ್ ನ ವಿವಿಧ ಅನುಧಾನ ಹಾಗೂ ಉದ್ಯೋಗ ಖಾತ್ರಿ ಯೋಜನೆ ಒಳಗೊಂಡಂತೆ 2019-20 ನೇ ಸಾಲಿನಲ್ಲಿ ಸಂಪಾಜೆ ಗ್ರಾಮಕ್ಕೆ ಸುಮಾರು 1.50 ಕೋಟಿ ಅನುದಾನ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಶ್ರೀ ಕೆ.ಜಿ.ಬೋಪಯ್ಯನವರು ಆಗಮಿಸಿದ ನಂತರ ಕೊಯನಾಡು ಶಾಲಾ ನೂತನ ಕಟ್ಟಡ, ಕೊಯನಾಡು ಗುಡ್ಡೆಗದ್ದೆ ಕಾಂಕ್ರೀಟ್ ರಸ್ತೆ,ಕುಂಠಿಕಾನ ಕೂಟೇಲು ಕಾಂಕ್ರೀಟ್ ರಸ್ತೆ, ಬೈಲು ಅಂಗನವಾಡಿಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ, ಗ್ರಾಮ ಪಂಚಾಯತ್ ಸಭಾಭವನ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮವು ನಡೆಯಿತು.
ಸಮಾರಂಭದಲ್ಲಿ ಪ್ರಾರ್ಥನೆಯೊಂದಿಗೆ ಮೊದಲ್ಗೊಂಡು ಅಧ್ಯಕ್ಷತೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕುಮಾರ್ ಚೆದ್ಕಾರ್ ವಹಿಸಿದರು, ಸಮಾರಂಭದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಕೆ.ಜಿ.ಬೋಪಯ್ಯ, ತಾಲೂಕು ಪಂಚಾಯತ್ ಸದಸ್ಯ ಶ್ರೀ ನಾಗೇಶ್ ಕುಂದಲ್ಪಾಡಿ, ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಅನಂತ ಎನ್.ಸಿ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಸುಂದರ ಬಿಸಿಲುಮನೆ, ಕೃಷಿ ಉತ್ಪನ್ನ ಮಾರುಕಟ್ಟೆ ಯ ಸದಸ್ಯರಾದ ದೇವಪ್ಪ ಕೊಯನಾಡು, ಕೃಷಿ ಉತ್ಪನ್ನ ಮಾರುಕಟ್ಟೆ ಯ ಮಾಜಿ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೋಭಾರಾಣಿ, ಸದಸ್ಯರಾದ ಶ್ರೀ ರಮಾದೇವಿ ಬಾಲಚಂದ್ರ ಕಳಗಿ, ಸಂಪಾಜೆ ಪಂಚಾಯತ್ ಚುನಾಯಿತ ಪ್ರತಿನಿಧಿಗಳು, ರೈತ ಹಿತರಕ್ಷಣಾ ವೇದಿಕೆ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿವರ್ಗದವರು, ಆರಕ್ಷಕ ಠಾಣಾ ಸಿಬ್ಬಂದಿಗಳು, ಕೃಷಿ ಪತ್ತಿನ ಸಹಕಾರಿ ಸಂಘದ ಚುನಾಯಿತ ಪ್ರತಿನಿಧಿಗಳು, ಪಂಚಾಯತ್ ಮಾಜಿ ಸದಸ್ಯರುಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು ಹಾಗೂ ಸಮಸ್ತ ಗ್ರಾಮಸ್ಥರು ಭಾಗವಹಿಸಿದ್ದರು..
ಸಮಾರೋಪ ಸಮಾರಂಭದಲ್ಲಿ ದೇಶಕ್ಕೆ ಮಾರಕವಾದ ಕೊರೊನಾ ವೈರಸ್ ಜಾಗೃತಿ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಆರಕ್ಷಕ ಠಾಣಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಇಡೀ ದೇಶಕ್ಕೆ ಮಾದರಿ, ರಾಜ್ಯಕ್ಕೆ ಮಾದರಿಯಾಗಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಪೂರೈಸಿ ರಾಷ್ಟ್ರೀಯ ಮಟ್ಟದಲ್ಲಿ ಸಶಸ್ತ್ರಿಕರಣ ರಾಷ್ಟ್ರ ಪ್ರಶಸ್ತಿ ಪಡೆದು ಹೆಗ್ಗಳಿಕೆ ಮೆರೆದ ಗ್ರಾಮ ಕೊಡಗು-ಸಂಪಾಜೆ ಗ್ರಾಮ ಪಂಚಾಯತ್, ರಾಷ್ಟ್ರ ಪ್ರಶಸ್ತಿ ಪಡೆದು ಹಲವು ವರುಷಗಳಿಂದ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದ ಸಂಪಾಜೆ ಬಿ.ಜೆ.ಪಿ ನಾಯಕ, ಅಭಿವೃದ್ಧಿ ಮಾಣಿಕ್ಯ,ಕೊಡಗು ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ದಿ// ಶ್ರೀ ಬಾಲಚಂದ್ರ ಕಳಗಿಯವರನ್ನು ಸ್ಮರಿಸುತ್ತ ಸರಳ ರೀತಿಯಲ್ಲಿ ಸಮಾರೋಪ ಸಮಾರಂಭ ನಡೆಸಲಾಯಿತು.
ಕಾರ್ಯಕ್ರಮದ ಅಭಿನಂದನಾ ಬಾಷಣವನ್ನು ಶ್ರೀ ಕುಮಾರ್ ಚೆದ್ಕಾರ್, ಧನ್ಯವಾದ ಸಮರ್ಪಣೆಯನ್ನು ಶ್ರೀಮತಿ ಶೋಭಾರಾಣಿ ನೆರವೇರಿಸಿದರು ಹಾಗೂ ಪುರುಷೋತ್ತಮ ಬಾಳೆಹಿತ್ಲು ಕಾರ್ಯಕ್ರಮವನ್ನು ನಿರೂಪಿಸಿದರು.