ಕೋವಿಡ್ 19 ರ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಧಾರ್ಮಿಕ ಕೇಂದ್ರಗಳ ದ್ವಾರಗಳನ್ನು ಮುಚ್ಚಲ್ಪಟ್ಟು ಕಳೆದ ಎರಡೂವರೆ ತಿಂಗಳಿನಿಂದ ಪೂಜಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್ 8 ರಿಂದ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಪೂಜಾ ಆರಾಧನೆಗೆ ಅವಕಾಶ ನೀಡಲಾಯಿತು.
ಇದೀಗ ಕೊರೋಣ ಮಹಾಮಾರಿಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂನ್ 26ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಎಲ್ಲಾ ಧಾರ್ಮಿಕ ಮುಖಂಡರುಗಳು ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ತಮ್ಮ ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಸರ್ಕಾರದ ನಿಯಮಾನುಸಾರ ಕೈಗೊಂಡಿರುವ ಮುಂಜಾಗ್ರತ ಕ್ರಮವನ್ನು ಅನುಸರಿಸಿ ಕೊಳ್ಳುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸುಳ್ಯ ಠಾಣಾ ಮುಖ್ಯಧಿಕಾರಿ ಎಸ್ ಐ ಹರೀಶ್ ಎಂ ಆರ್ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.ಕ್ರೈಂ ಎಸ್ ಐ ರತ್ನಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .
ಸಭೆಯಲ್ಲಿ ಮಸ್ಜಿದ್ ಕಮಿಟಿ ಮುಖಂಡರುಗಳಾದ ಹಾಜಿ ಮುಸ್ತಫಾ ಜನತಾ ,ಐ ಇಸ್ಮಾಯಿಲ್ ಹಾಜಿ, ಹಮೀದ್ ಬೀಜ ಕೊಚ್ಚಿ, ಮಜಿದ್ ಅರಂತೋಡು, ಉಮ್ಮರ್ ಕೆಎಸ್, ಕೆಬಿ ಮಜೀದ್, ರಿಯಾಜ್ ಕಟ್ಟೆ ಕಾರ್ಸ್, ಶ್ರೀ ಚೆನ್ನಕೇಶವ ದೇವಸ್ಥಾನದ ಮುಕ್ತೇಸರರಾದ ಹರ ಪ್ರಸಾದ್ ತುದಿಯಡ್ಕ, ಶ್ರೀ ಕಲ್ಕುಡ ದೈವಸ್ಥಾನದ ಹಿರಿಯರು ತಿಮ್ಮಪ್ಪ ಮೊದಲಾದವರು ಉಪಸ್ಥಿತರಿದ್ದರು.
- Thursday
- November 21st, 2024