
ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.) ಇದರ ಆಶ್ರಯದಲ್ಲಿ 4 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮವನ್ನು ಅಮರಪಡ್ನೂರಿನ ಶೇಣಿಯ ಸೂರೆಂಗಿ ಪರಿಸರದಲ್ಲಿ ಇಂದು ನಡೆಸಲಾಯಿತು. ಶ್ರೀ ಸುಬ್ರಾಯ ನಾಯ್ಕ್ ಸೂರೆಂಗಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವೃಕ್ಷಾರೋಹಣದಲ್ಲಿ ಪಾಲ್ಗೊಂಡರು.ಸಂಘದ ಸದಸ್ಯರಾದ ಅವಿನ್ ಕೆರೆಮೂಲೆ, ತೇಜಸ್ ಮರ್ಗಿಲಡ್ಕ ,ನವೀನ ದರ್ಖಾಸು, ತೇಜಸ್ವಿ ಕಡಪಳ, ಮಹೇಶ್ ಶೇಣಿ , ಪ್ರಶಾಂತ್ ಶೇಣಿ ,ಕೃತಿಕ್ ಕುಳ್ಳಾಜೆ,ವಿಶ್ವನಾಥ ಕುಳ್ಳಾಜೆ ಮತ್ತು ಯಶ್ವಿತ್ ಕುಳ್ಳಾಜೆ ವೃಕ್ಷಾರೋಹಣ ದಲ್ಲಿ ಪಾಲ್ಗೊಂಡಿದ್ದರು. ದಾಳಿಂಬೆ,ಪುನರ್ಪುಳಿ,ಕೋಳ್ಜುಟ್ಟು,ಸುರಹೊನ್ನೆ,ಮಹಾಗನಿ,ನಿಂಬೆ,ಕಹಿ ಬೇವು,ಮಾವು,ನೆಲ್ಲಿ ಮುಂತಾದ 200 ಹಣ್ಣಿನ ಮತ್ತು ಬಹೂಪಯೋಗಿ ಗಿಡಗಳನ್ನು ನೆಡಲಾಯಿತು.