ಕೊರೊನದಿಂದಾಗಿ ತೂಗುಯ್ಯಲೆಯಲ್ಲಿದ್ದ ಪರೀಕ್ಷೆಗೆ ಇಂದು ಮುಹೂರ್ತ ಕೂಡಿಬಂದಿದೆ. ಜೂ. 25 ರಿಂದ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಪೋಷಕರಿಗೆ ಅಗ್ನಿ ಪರೀಕ್ಷೆಯೇ ಆಗಿದೆ. ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಿದ್ದರೂ ಪೋಷಕರ ಭಯ ಕಡಿಮೆಯಾಗಬೇಕಾದರೇ ಯಶಸ್ವಿಯಾಗಿ ಪರೀಕ್ಷೆ ಮುಗಿಯಬೇಕಷ್ಟೆ. ಸರಕಾರ ಬಸ್ ಗಳ ವ್ಯವಸ್ಥೆ ಮಾಡಿದೆಯಾದರೂ ಮಕ್ಕಳು ಅಂತರ ಕಾಪಾಡುವಿಕೆ ಬಗ್ಗೆ ನಿಗ ವಹಿಸುವ ಅಗತ್ಯತೆ ಇದೆ. ಪರೀಕ್ಷಾ ಕೇಂದ್ರ ತಲುಪಿದ ಮೇಲೆ ಎಲ್ಲಾ ನಿಯಮ ಪಾಲನೆ ಸರಿಯಾಗಿ ಮಾಡಬಹುದು. ಆದರೇ ಮಕ್ಕಳು ಬಸ್ ಹಾಗೂ ಇತರ ವಾಹನಗಳಲ್ಲಿ ಬರುವಾಗ ಹೋಗುವಾಗ ನಿಯಮಗಳ ಪಾಲನೆ ಬಗ್ಗೆ ಪೋಷಕರು ತಿಳಿಹೇಳುವ ಅಗತ್ಯತೆ ಇದೆ.
ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಶೀತ, ಕೆಮ್ಮು, ಜ್ವರ ಕಂಡುಬಂದರೇ ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 8.48.203 ಮಕ್ಕಳು ಇಂದು ಪರೀಕ್ಷೆಗೆ ಒಳಪಡಲಿದ್ದಾರೆ. 2879 ಪರೀಕ್ಷಾ ಕೇಂದ್ರಗಳ ವ್ಯವಸ್ಥೆಗೊಳಿಸಲಾಗಿದೆ. ರಾಜ್ಯಾದ್ಯಂತ 12674 ಬಸ್ ಗಳನ್ನು ವಿದ್ಯಾರ್ಥಿಗಳನ್ನು ಕರೆತರಲು ನಿಯೋಜನೆ ಮಾಡಿ ಬಸ್ ಸಮಯದ ವೇಳಾಪಟ್ಟಿ ಪ್ರಕಟಿಸಿದೆ. ವಿಧ್ಯಾರ್ಥಿಗಳು ಅನಾರೋಗ್ಯದಿಂದ ಗೈರಾದರೇ ಪೂರಕ ಪರೀಕ್ಷೆ ಪರೀಕ್ಷೆ ನಡೆಸಲು ಇಲಾಖೆ ತೀರ್ಮಾನಿಸಿದೆ.
- Sunday
- November 24th, 2024