ಸುಳ್ಯ ನಗರ ಬೂಡು ವಾರ್ಡಿನ ಅಂಗನವಾಡಿ ಕೇಂದ್ರಕ್ಕೆ ತಡೆಗೋಡೆ ನಿರ್ಮಿಸಲು ಅನುದಾನ ಹೊದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರವರಿಗೆ ಸ್ಥಳೀಯ ನ.ಪಂ ಸದಸ್ಯ ರಿಯಾಜ್ ಕಟ್ಟೇಕ್ಕಾರ್ ಮನವಿ ನೀಡಿದರು.
ಜೂನ್ 23ರಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸುಳ್ಯ ಮಾರ್ಗವಾಗಿ ಮಡಿಕೇರಿ ತೆರಳುತ್ತಿರುವ ಸಂದರ್ಭ ಪರಿವಾರಕಾನ ಹೋಟೆಲ್ ಉಡುಪಿ ಗಾರ್ಡನ್ ನಲ್ಲಿ ಈ ಮನವಿಯನ್ನು ನೀಡಿದ್ದಾರೆ. ಮನವಿಯಲ್ಲಿ ಕಳೆದ ಹಲವು ವರ್ಷಗಳಿಂದ ಅಂಗನವಾಡಿ ಕಟ್ಟಡ ತಡೆಗೋಡೆ ಇಲ್ಲದೆ ಕುಸಿಯುವ ಭೀತಿಯಲ್ಲಿದೆ.ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಆದ್ದರಿಂದ ಜಿಲ್ಲಾ ಉಸ್ತುವಾರಿಗಳಾದ ತಾವು ರುಪಾಯಿ 5 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ ಅಂಗನವಾಡಿ ಕಟ್ಟಡಕ್ಕೆ ಭದ್ರತೆ ಒದಗಿಸಲು ತಡೆಗೋಡೆ ನಿರ್ಮಿಸಲು ಸಹಕಾರಿ ಆಗಬೇಕೆಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ, ನಗರ ಪಂಚಾಯತ್ ಇಂಜಿನಿಯರ್
ಉಡುಪಿ ಗಾರ್ಡನ್ ಕಟ್ಟಡ ಮಾಲಕ ಲತೀಫ್, ರಂಜಿತ್ ಪೂಜಾರಿ ಸುಳ್ಯ,ನ.ಪಂ.ಇಂಜಿನಿಯರ್ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.