ಜಗತ್ತಿನಾದ್ಯಂತ ಆವರಿಸುತ್ತಿರುವ ಕೊರೊನಾ ಮಹಾಮಾರಿಯನ್ನು ಹರಡದಂತೆ ಜಾಗೃತೆ ವಹಿಸಲು
ಆಯುರ್ವೇದಯುಕ್ತ ಕಷಾಯವನ್ನು ಕುಡಿಯುವಂತೆ ಸಾರ್ವಜನಿಕರಿಗೆ ಸರಕಾರ ಜಾಗೃತಿ ಮೂಡಿಸಬೇಕೆಂದು ಸುಳ್ಯದ ಸುಮಿತ್ರಾ ಎಸೋಸಿಯೇಟ್ ನ ಮಾಲಕರಾದ ಸುಮಿತ್ರ ಡಿ.ಎಂ. ಸರಕಾರಕ್ಕೆ ಮನವಿ ಮಾಡಿದ್ದಾರೆ. ಮನವಿಯ ಪ್ರತಿಯನ್ನು ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ, ಗೃಹ ಮಂತ್ರಿ, ಆರೋಗ್ಯ ಮಂತ್ರಿ ಮತ್ತು ಆರೋಗ್ಯ ಇಲಾಖೆಗಳಿಗೆ ಸಲ್ಲಿಸಿದ್ದಾರೆ. ಮನವಿಯಲ್ಲಿ
“ಪೂಜ್ಯ ರವಿಶಂಕರ ಗುರೂಜೀಯವರು ಕೆಲವು ತಿಂಗಳ ಹಿಂದೆ ಕೊರೋನಾ ವೈರಸ್ ಜಗತ್ತಿನಾದ್ಯಂತದ ಹಬ್ಬುವ ಮೊದಲ ಹಂತದಲ್ಲಿ ಪತ್ರಿಕಾ ಪ್ರಕಟನೆಯಲ್ಲಿ ಭಾರತದಲ್ಲಿ ಕೊರೋನಕ್ಕೆ ಗಾಬರಿಯಾಗುವುದು ಬೇಡ. ನಾವು ಉಪಯೋಗಿಸುವ ದೈನಂದಿನ ಜೀನಸು, ಜೀರಿಗೆ, ಅರಸಿನ ಮತ್ತು ಇತರ ಆಯುವೇ೯ದ ಮೂಲ ವಸ್ತುಗಳನ್ನು ಉಪಯೋಗಿಸಿದರೆ ಕೊರೋನ ವೈರಸ್ ನಿಂದ ಮುಕ್ತವಾಗಬಹುದು ಎಂದಿದ್ದರು. ಭಾರತದಲ್ಲೇ ಅತೀ ಹೆಚ್ಚು ವೈರಸ್‌ಗೆ ತುತ್ತಾದ ಕಾಸರಗೋಡು, ಕೇರಳದಲ್ಲಿ ವೈರಸ್ ಹಬ್ಬುತ್ತಿದ್ದಾಗ ವ್ಯಾಟ್ಸ್ ಆಫ್ ಮೆಸೇಜ್‌ನಲ್ಲಿ ಹಲವು ರೀತಿಯ ಪರಿಹಾರ ಉಪಾಯಗಳು ಬರುತ್ತಿದ್ದು ಅದರಲ್ಲಿ ಪರಿಣಾಮಕಾರಿಯಾಗಿ ೧)ಬೆಳ್ಳುಳ್ಳಿ ಕಷಾಯ
೨) ಶುಂಠಿ, ಲವಂಗ, ಒಳ್ಳೆಮೆಣಸು, ನಿಂಬೆಹುಳಿ, ಸಕ್ಕರೆ, ಚಾಪುಡಿ ಕಷಾಯ (ಭಾಗ್ಯ ವೀಡಿಯೋ)ಗಳನ್ನು ದಿನ ನಿತ್ಯ ಬಿಸಿ ಬಿಸಿ ಸೇವಿಸುವುದರಿಂದ ವೈರಸ್ ಹರಡುವುದನ್ನು ಸಂಪೂರ್ಣ ತಡೆಗಟ್ಟಬಹುದು ಮತ್ತು ವೈರಸನ್ನು ನಿರ್ಮೂಲನೆ ಮಾಡಬಹುದು ಎಂದಿತ್ತು. ಜನರು ಇದನ್ನು ಸೇವಿಸಿದ್ದಾರೆ ಮತ್ತು ಪ್ರಯೋಜನವಿದೆ ಎಂದು ಕಂಡುಬದ ಕಾರಣ ಇದನ್ನು ಕೇರಳದಲ್ಲಿ/ಕಾಸರಗೋಡಿನಲ್ಲಿ/ಕರ್ನಾಟಕದಲ್ಲಿ ನೂರಾರು ಜನರು ವ್ಯಾಟ್ಸ್ ಆಫ್ ಮೆಸೇಜ್ ಮೂಲಕ ಪ್ರಚಾರ ಮಾಡಿದರು. ವೈರಸ್ ಹಬ್ಬುತ್ತಿರುವ ಕಾಸರಗೋಡಿನಲ್ಲಿ ಸೂಕ್ಷ್ಮವಾಗಿ ಇದನ್ನು ಗಮನಿಸಲಾಗಿದೆ. ಪರಿಣಾಮ ಒಂದೇ ತಿಂಗಳಿನಲ್ಲಿ ವೈರಸ್ ಮುಕ್ತ ಪ್ರದೇಶವಾಗಿ ಕೇರಳ/ ಕಾಸರಗೋಡು/ಕರ್ನಾಟಕ ಮಾರ್ಪಾಡು ಹೊಂದುತ್ತಾ ಇದೆ. ಇದಕ್ಕೆ ಮೇಲಿನ ಕಷಾಯ ಕೂಡ ಕಾರಣವಾಗಿರಬಹುದು.
ಮೇಲಿನ ಎರಡು ರೀತಿಯ ಕಷಾಯ ಕುಡಿದಾಗ ನಮಗೆ ಗಂಟಲಿನಲ್ಲಿ ನೆಮ್ಮದಿ ಸಿಗುತ್ತದೆ. ಶರೀರಕ್ಕೆ ಉಲ್ಲಾಸ ಸಿಗುತ್ತದೆ. ನಾವು ದಿನ ನಿತ್ಯ ಉಪಯೋಗಿಸುವ ಜೀನಸು ಪದಾಥ೯ ಇದಾದುದರಿಂದ ಯಾವುದೇ ತೊಂದರೆ ಇಲ್ಲದೆ ದೇಶದಾದ್ಯಂತ ಪ್ರತಿಯೊಬ್ಬರೂ ಪ್ರತೀ ದಿನ ಕೊರೋನ ನಿರ್ಮೂಲನೆ ಆಗುವ ತನಕ ಉಪಯೋಗಿಸಬಹುದು. ದೇಶವು ಕೊರೋನದಿ೦ದ ೧-೨ ತಿಂಗಳೊಳಗೆ ಖಂಡಿತವಾಗಿ ಪಾರಾಗಬಹುದು ಇದು ಸತ್ಯ.
ಈ ಕಡು ಸತ್ಯವನ್ನು ಸರಕಾರ ಮತ್ತು ಜನತೆಯ ಟಿ.ವಿ.ಮಾದ್ಯಮಗಳ ಗಮನಕ್ಕೆ ತರಬೇಕಾಗಿ ಪ್ರಾರ್ಥನೆ” ಎಂಬುದಾಗಿ ನಮೂದಿಸಿದ್ದಾರೆ.
- Friday
- November 22nd, 2024