ಬೆಳ್ಳಾರೆ : ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಡಿಕೇರಿ ತಾಲೂಕಿನವರಿಗೆ ಏರ್ಪಡಿಸಿದ ಕಥಾ ಮತ್ತು ಕವನ ಸ್ಪರ್ದೆಯ ಫಲಿತಾಂಶ ಪ್ರಕಟಗೊಂಡಿದೆ.
ಕವನ ಸ್ಪರ್ದೆಯಲ್ಲಿ ನಾರಾಯಣ ಕೇಳತ್ತಾಯ, ಸುಳ್ಯ (ಪ್ರ), ಆಶ್ಲೇಷ್ ಕುಮಾರ್ ಕಾಣಿಯೂರು (ದ್ವಿ), ಸುಜಯ ಶ್ರೀ ವಿಟ್ಲ (ತೃ) ಹಾಗೂ ಸತ್ಯವತಿ ಭಟ್ ಕೊಳಚಪ್ಪೆ, ಸಂಧ್ಯಾ ಶ್ಯಾಮ ಭಟ್ ಮುಂಡತ್ತಜೆ, ಚೇತನ್ ಪೂಜಾರಿ ವಿಟ್ಲ, ಎಂ.ಗಣೇಶ್ ಭಟ್ ಮಾಪಲಮಜಲು, ಡಾ|ಅನುರಾಧ ಕುರುಂಜಿ, ವಿಶ್ವನಾಥ ಎನ್ ನೇರಳಕಟ್ಟೆ ಅವರು ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಾರೆ.
ಕಥಾ ಸ್ಪರ್ದೆಯಲ್ಲಿ ಸಹನಾ ಕಾಂತಬೈಲು (ಪ್ರ), ಲಿಖಿತಾ ಜಿ ಅರಂತೋಡು(ದ್ವಿ), ಅಥಿಕ್ ಕುಮಾರ್ ಕೂಳೂರು, ಮಂಗಳೂರು(ತೃ) ಹಾಗೂ ಜೆಸ್ಸಿ ಪಿ.ವಿ., ಸಮೀಕ್ಷಾ ಬಿ ಕುತ್ತಾರು, ಮಂಗಳೂರು, ಗೋವಿಂದ ಭಟ್ ಕೊಳ್ಚಪ್ಪೆ, ಮಂಗಳೂರು ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಾರೆ.
ಕವನ ಸ್ಪರ್ದೆಯ ತೀಪುಗಾರರಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಕವಯತ್ರಿ ಅಶ್ವಿನಿ ಕೋಡಿಬೈಲು ಹಾಗೂ ಕಥಾ ಸ್ಪರ್ದೆಯ ತೀರ್ಪುಗಾರರಾಗಿ ಕುತ್ಯಾಳ ನಾಗಪ್ಪ ಗೌಡ (ಕಿರಣ) ಅವರು ಸಹಕರಿಸಿದರು.