ನನ್ನ ಮುದ್ದು ಕಂದಮ್ಮ ನೀನು…
ನಮ್ಮ ಮನೆಯ ಪುಟ್ಟ ಲಕ್ಷ್ಮೀ….
ದೇವರು ನೀಡಿದ ಉಡುಗೊರೆ ಇವಳು…
ನಮ್ಮೆಲ್ಲರ ಖುಷಿಗೆ ಕಾರಣಳಿವಳು…
ನಿಶ್ಕಲ್ಮಶ ಮನಸ್ಸಿನ ಪುಟ್ಟ ರಾಜಕುಮಾರಿ…
ನಗುವಿನ ಮುಖ ತೋರಿ ತಾನು
ನಗುತ್ತಾ ನಮ್ಮನ್ನು ನಗಿಸುವವಳು..
ನೋವನ್ನು ಮರೆಸುವ ಮನಸ್ಸುಳ್ಳವಳು….
ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ಕುಣಿಯುತ್ತಾ,
ಆ ತೊದಲುನುಡಿಯಲ್ಲಿ ಮಾತನ್ನಾಡುತ್ತಾ
ಎಲ್ಲರ ಮನಸ್ಸನ್ನು ಕದ್ದಿರೋ ಪುಟ್ಟ ಮಗು …..
ನನ್ನ ಮನದರಸಿ ಇವಳು…
ಎಂದೆಂದಿಗೂ ಖುಷಿಯಾಗಿ ನಗುತ್ತಾ,
ತುಂಟಾಟವಾಡುತ್ತಾ ಹೀಗೆಯೆ ಇರು….
ಜ್ಯೋತ್ಸ್ನಾ . ಎಂ. ಬಿ
ಮಂದ್ರಪ್ಪಾಡಿ ಮನೆ