ಜನವರಿ ತಿಂಗಳಲ್ಲಿ ನಡೆದ ನವೋದಯ 6 ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು , ತಾಲೂಕಿನ ಬೆಳ್ಳಾರೆ , ಸುಳ್ಯ ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯದ ಜ್ಞಾನದೀಪ ನಮೋದಯ ತರಬೇತಿ ಸಂಸ್ಥೆಯಿಂದ ತರಗತಿಗಳನ್ನು ಪಡೆದ 18 ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ . ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಪೂರ್ವಿ ಕೆ.ಎಂ , ಕೋಲ್ವಾರು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಸೋಮಿಲಾರಾಮ್ ಕೆ.ಎಸ್ , ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ಮೌರ್ಯಕೃಷ್ಣ ಎನ್ ಪಾರೆಪ್ಪಾಡಿ , ಪೆರಾಜೆ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಹವ್ಯಶ್ರೀ ಹೆಚ್.ಕೆ , ಐವರ್ನಾಡು ಸ.ಹಿ.ಪ್ರಾ.ಶಾಲೆಯ ಧನ್ಯಶ್ರೀ ಎ , ನಾಗತೀರ್ಥ ಸ.ಹಿ.ಪ್ರಾ . ಶಾಲೆಯ ಅನನ್ಯ ಬಿ.ಜಿ , ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ರೋಶಿತ್ ಪಿ.ಡಿ , ಕೆಯ್ಯರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮಾನಸ ಎಂ , ಬಾಳುಗೋಡು ಸ.ಹಿ.ಪ್ರಾ.ಶಾಲೆಯ ಮೋನಿಶ್ ಕೆ , ನಿಂತಿಕಲ್ಲು ಕೆ.ಎಸ್ ಗೌಡ ಹಿರಿಯ ಪ್ರಾಥಮಿಕ ಶಾಲೆಯ ಚಲನ ಬಿ , ಎಣ್ಣೆಮಜಲು ಸ.ಕಿ.ಪ್ರಾ . ಶಾಲೆಯ ನಿಶಾಂತ್ ಎನ್.ಪಿ , , ವಾಲ್ಕಾಜೆ ಸ.ಕಿ.ಪ್ರಾ.ಶಾಲೆಯ ರಚನಾ ಕೋಲ್ವಾರ್ , ಕಡಬ ಸರಸ್ವತಿ ವಿದ್ಯಾಲಯದ ಯಜೇಶ್ ಎ.ಆರ್ , ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ನಿಹಾರಿಕಾ ಪಿ.ಹೆಚ್ , ಬಿಳಿನೆಲೆ ವೇದವ್ಯಾಸ ವಿದ್ಯಾಲಯದ ಜಸ್ವಿಂತ್ ಎನ್.ಯು , ಬಾಳುಗೋಡು ಸ.ಹಿ.ಪ್ರಾ.ಶಾಲೆಯ ಧನುಷ್ ಪಿ , ಮಾಲೆತ್ತೋಡಿ ಕಿ.ಪ್ರಾ.ಶಾಲೆಯ ಧನುಷ್ ಕುಮಾರ್ , ನಿಂತಿಕಲ್ಲು ಕೆ.ಎಸ್ ಗೌಡ ಹಿರಿಯ ಪ್ರಾಥಮಿಕ ಶಾಲೆಯ ವೃದ್ಧಿ ಕೆ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ .
- Tuesday
- November 5th, 2024