
ಜಾಲ್ಸೂರು ಗ್ರಾಮದ ಅಣ್ಣಯ್ಯ ಗೌಡ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಅರೋಗ್ಯ ಇಲಾಖೆಯಲ್ಲಿ ೩೩ ವರ್ಷಗಳ ಸೇವೆ ಸಲ್ಲಿಸಿ ನಿವೃತರಾದ ಬಳಿಕ ಗೃಹ ರಕ್ಷಕ ದಳದಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪುತ್ರಿಯರಾದ ಆರೋಗ್ಯ ಇಲಾಖೆಯಲ್ಲಿರುವ ಹೇಮಾವತಿ, ಬೇಬಿ, ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಹರಿಣಾಕ್ಷಿ, ಪುತ್ರ ಗೃಹರಕ್ಷದ ದಳದಲ್ಲಿರುವ ರಾಜೇಶ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.