ಸುಳ್ಯನಾಗಪಟ್ಟಣ ಆಲೆಟ್ಟಿ ಅಂತರರಾಜ್ಯ ಕರ್ನಾಟಕ ಕೇರಳ ಸಂಪರ್ಕ ರಸ್ತೆಯು ರೂ.30 ಲಕ್ಷ ವೆಚ್ಚದಲ್ಲಿ ಸುಳ್ಯ ನಗರ ವ್ಯಾಪ್ತಿ ಯಲ್ಲಿ ಇದೇ ಮೇ 29 ರಂದು ಸುಳ್ಯ ಶಾಸಕರ ನೇತೃತ್ವದಲ್ಲಿ ಕಾಮಾಗಾರಿ ಆರಂಭವಾಗಿ ಇದೀಗ 15 ದಿವಸ ಕಳೆದಾಗ ರಸ್ತೆ ಬಿರುಕು ಬಿಟ್ಟಿದ್ದು ಸಂಪೂರ್ಣ ಕಾಮಾಗಾರಿಯ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಒತ್ತಾಯಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಎಡಮಲೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಇದನ್ನು ಪ್ರಶ್ನಿಸದೆ ಇದ್ದಲ್ಲಿಪ್ರಜಾಪ್ರಭುತ್ವದಲ್ಲಿ ಸಂವಿಧಾನ ಹಕ್ಕುಗಳ ಜೊತೆಗೆ ಕರ್ತವ್ಯದ ಉಲ್ಲಂಘನೆಯಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರ ಪಂಚಾಯತ್ ವ್ಯಾಪ್ತಿಯ ರಸ್ತೆ ಯಾಗಿ ನಗರ ಆಡಳಿತ ತನ್ನದಲ್ಲ ಎನ್ನುತ್ತಿದ್ದೆ. ಜಿ.ಪಂ ಅಥವಾ ಲೋಕೋಪಯೋಗಿ ಇಲಾಖೆಯು ತನ್ನದಲ್ಲ ಎಂದು ದಶಕಗಳ ಅನಾಥವಾಗಿದ್ದ ಈ ರಸ್ತೆಗೆ ಕ್ಷೇತ್ರದ 27 ವರ್ಷ ಶಾಸಕರಾದ ಮಾನ್ಯ ಅಂಗಾರ ಅವರು ಇತ್ತೀಚೆಗೆ ಕಾಮಾಗಾರಿ ಗುದ್ದಲಿ ಪೂಜೆ ನೆರವೇರಿಸಿದ್ದರು.. ಜೊತೆಯಲ್ಲಿ ಬಹುತೇಕ ಧರ್ಮ ರಕ್ಷಣೆಯ ಬಿಜೆಪಿ ಪಕ್ಷದ ಜನಪ್ರತಿನಿಧಿ ಹಾಗೂ ರಾಜಕೀಯ ಧುರೀಣರು ಫೋಟೋ ಸೆಷನ್ ಮಾಡಿಕೊಂಡು ಅಭಿವೃದ್ಧಿ ಅಂದರೆ ಕಳಪೆ ರಸ್ತೆ ಮಾತ್ರ ಎಂಬಂತೆ ನಮ್ಮ ಜನಸಾಮಾನ್ಯರ ಬೆವರಿನ ತೆರಿಗೆಯ ಹಣವನ್ನು ತಾವೇ ಪಕ್ಷದಿಂದ ಕೊಟ್ಟಂತೆ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಇದೀಗ ಎರಡು ವಾರದಲ್ಲಿ ಅಧರ್ಮ ರಕ್ಷಣೆಯ ಫಲವಾಗಿ ಪೂರ್ಣವಾದ ರಸ್ತೆ ಕಾಮಾಗಾರಿ ಬಿರುಕು ಬಿಟ್ಟಿದೆ. ಸತತ ಮಳೆಯಾದರೆ ಮಳೆಯ ನೆಪದಲ್ಲಿ ತಪ್ಪಿಸಿಕೊಳ್ಳಲು ಮಳೆಗಾಲ ಆರಂಭವಾದ ನಂತರ ಕಾಮಾಗಾರಿ ಆರಂಭ ಮಾಡಿದ್ದರು.ಆದರೆ ಈ ಬಾರಿ ಮಳೆ ಅಷ್ಟೇನೂ ಹೆಚ್ಚು ಆಗಿಲ್ಲದ ಕಾರಣ ಮಳೆಯ ಸಬೂಬು ಕೊಡುವಂತಿಲ್ಲವಾಗಿದೆ.
ರಸ್ತೆ ಕಾಮಾಗಾರಿ ಸ್ಥಳೀಯ ಗುತ್ತಿಗೆದಾರರನ್ನು ಬಿಟ್ಟು ಟೆಂಡರ್ ಮಾಡದೇ ಗ್ರಾಮೀಣ ರಸ್ತೆ ಗುತ್ತಿಗೆ ಪಡೆಯುವ ಖಾಸಗಿ KRIDL ಗೆ ಟೆಂಡರ್ ಕರೆಯದೆ ನೇರ ಗುತ್ತಿಗೆ ನೀಡಿ ನಿಯಮ ಬಾಹಿರವಾಗಿ ಕ್ರಮ ಕೈಗೊಳ್ಳಲಾಯಿತು. ಮಾತ್ರವಲ್ಲ ನಗರ ಆಡಳಿತ ಮೂಲಕ ಸ್ಥಳೀಯ ಗುತ್ತಿಗೆದಾರರ ಮೂಲಕ ಕೋವಿದ್ ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ಒದಗಿಸಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಅವಕಾಶ ಇತ್ತು. ಆದರೆ ಈ ಅವೈಜ್ಞಾನಿಕ ಕಾಮಾಗಾರಿ ಸಂಪೂರ್ಣ ನುಂಗಿ ಹಾಕಲೆಂದೇ ಮಾಡಲಾಗಿದೆ ಎಂಬ ಆರೋಪಕ್ಕೆ ಉತ್ತರಿಸಬೇಕಾಗಿದೆ. ಆ ರಸ್ತೆ ಉಪಯೋಗಿಸುವ ಆಲೆಟ್ಟಿ ಭಾಗದಲ್ಲಿ ಇರುವ ಸಾರ್ವಜನಿಕರು ಹಾಗೂ ಖಾಸಗಿ ಸಿವಿಲ್ ಇಂಜಿನಿಯರ್ ಸಮ್ಮುಖದಲ್ಲಿ ಕೊರ್ ಕಟ್ಟಿಂಗ್ ಪದ್ದತಿಯ ಗುಣಮಟ್ಟ ಪರೀಕ್ಷೆ ಮಾಡಬೇಕು. ಆ ಮೂಲಕ ಕಳಪೆ ಕಾಮಾಗಾರಿ ತನಿಖೆ ನಡೆಸಿ ಮತ್ತೆ ಗುಣಮಟ್ಟ ಕಾಯ್ದು ಜನರ ಬೆವರಿನ ತೆರಿಗೆಯ ರೂ 30 ಲಕ್ಷ ಪೋಲಾಗದಂತೆ ಕ್ರಮ ಕೈಗೊಳ್ಳಲು ಆಮ್ಆದ್ಮಿಪಾರ್ಟಿ ಸುಳ್ಯ ಆಗ್ರಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸರಕಾರಿ ವ್ಯವಸ್ಥೆಯ ಕೋರ್ ಕಟ್ಟಿಂಗ್ ಪರೀಕ್ಷೆ ವಿಧಾನ ಕಡ್ಡಾಯವಾಗಿ ಮಾಡಿ ವರದಿ ಸಾರ್ವಜನಿಕ ಗೊಳಿಸಬೇಕು ಎಂದು ಅವರು ಪಕ್ಷದ ವತಿಯಿಂದ ಒತ್ತಾಯಿಸಿ ರುತ್ತಾರೆ.