
SKSSF ಉಪ ಸಮಿತಿಯಾದ ಟ್ರೆಂಡ್ ದ. ಕ ಜಿಲ್ಲಾ ಸಮಿತಿ ರಚನೆ ಜೂ 21 ರಂದು ಪಾಣೆಮಂಗಳೂರು S. S ಆಡಿಟೊರಿಯಂ ನಲ್ಲಿ ನಡೆಯಿತು . ನೂತನ ಸಮಿತಿಯ ಉಸ್ತುವಾರಿಯಾಗಿ ಇಕ್ಬಾಲ್ ಬಾಳಿಲ, ಚೇರ್ಮನ್ ಸಮದ್ ಸಾಲೆತ್ತೂರ್, ಕನ್ವೀನರ್ ಅಬ್ದುಲ್ ಸಲಾಂ ಅಡ್ಡೂರ್, ವೈಸ್ ಕನ್ವೀನರ್ ಬದ್ರುದ್ದೀನ್ ಕುಕ್ಕಾಜೆ, ತೌಸೀಫ್ ಪಾಂಡವರಕಲ್ಲು, ತಬ್ಸೀರ್, ನೌಶಾದ್ ಅನ್ಸಾರಿ, ಸಿದ್ದೀಕ್ ನಾವೂರ ಕೊಶಾದಿಕಾರಿ ಯು. ಪಿ ಬಶೀರ್ ಬೆಳ್ಳಾರೆ ವರ್ಕಿಂಗ್ ಸದಸ್ಯರಾಗಿ ಶಫೀಖ್ ಕಟ್ಟತ್ತಾರು, ಕಾದರ್ ಮೊಟ್ಟೆಂಗಾರ್ ರವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ SKSSF ಜಿಲ್ಲಾದ್ಯಕ್ಷರಾದ ಅಮೀರ್ ತಂಙಲ್ ಕೀನ್ಯ ದುವಾ ನೆರವೇರಿಸಿದರು ದ. ಕ ಜಿಲ್ಲಾ ಟ್ರೆಂಡ್ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಉದ್ಘಾಟಿಸಿ ಸಂಘಟನೆಯ ಯೋಜನೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ SKSSF ದ. ಕ ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ನಾಯಕರು ಉಪಸ್ತಿತರಿದ್ದರು.