ಮುಂಬೈನಿಂದ ಗ್ರಾಮಕ್ಕೆ ಬಂದಿದ್ದ ಮಹಿಳೆ ಕೊರೊನ
ಸೋಂಕು ಹಿನ್ನೆಲೆಯಲ್ಲಿ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮುಂಬೈನಿಂದ ಬಂದಿದ್ದ ಮಹಿಳೆ 14 ದಿನ ಕೊರಂಟೈನ್ ನಲ್ಲಿದ್ದು ಕೊಡಗಿಗೆ ಬಂದಿದ್ದರು. ಮುನ್ನೆಚ್ಚರಿಕೆಯಾಗಿ ಆರೋಗ್ಯ ಇಲಾಖೆಯಿಂದ ತಪಾಸಣೆ ಕೈಗೊಂಡಾಗ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ
ಆಲೂರು ಸಿದ್ದಾಪುರ ಗ್ರಾಮ ಸೀಲ್ ಡೌನ್ ಗೊಳ್ಳಲಿದೆ. ಗ್ರಾಮಸ್ಥರ ಆರೋಗ್ಯ ತಪಾಸಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಸೋಮವಾರ ಒಂದೇ ದಿನ ಕೊಡಗಿನಲ್ಲಿ ಕೋರೋನಾ ಸೋಂಕಿನ 3 ಪ್ರಕರಣ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.
ಕೊಡ್ಲಿಪೇಟೆ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿನ ಹಂಡ್ಲಿ ಪಂಚಾಯತ್ ಬಳಿಯ ಶಿರಂಗಾಲ ಗ್ರಾಮದಲ್ಲಿ ಓರ್ವ ಸೋಂಕಿತ ವ್ಯಕ್ತಿಯಾಗಿದ್ದು
ಸೋಂಕಿತನ ನಾಲ್ವರು ಕುಟುಂಬ ಸದಸ್ಯರನ್ನು ಕೊರಂಟೈನ್ ಮಾಡಲಾಗಿದೆ.
ಭಾಗಮಂಡಲ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮ ಪಂಚಾಯತ್ ಪರಿಸರದಲ್ಲಿ ಮತ್ತೋವ೯ ಸೋಂಕಿತ ಪ್ರಕರಣದಿಂದ ಸೋಮವಾರದಂದೇ ಮೂರು ಹೊಸ ಪ್ರಕರಣ ದಾಖಲಾಗಿದೆ.
ಈವರೆಗೆ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಈ ಮೊದಲಿನ ಮೂರೂ ಸೋಂಕಿತ ವ್ಯಕ್ತಿಗಳು ಗುಣಮುಖರಾಗಿದ್ದು ಈಗಾಗಲೇ ಒಬ್ಬ ಡಿಸ್ಚಾರ್ಜ್ ಗೊಂಡಿದ್ದು ಮತ್ತಿಬ್ಬರು ನಾಳೆ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
- Sunday
- November 24th, 2024