Ad Widget

ಪರಿಸರದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ- ಮಂಜುನಾಥ್


ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ ನೇತೃತ್ವದಲ್ಲಿ ಮಹೋತ್ಸವ ಕಾರ್ಯಕ್ರಮ ಮಸೀದಿ ವಠಾರದಲ್ಲಿ ಜೂ.೨೨ ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆಯವರು ಪ್ರತಿವರ್ಷ ಗಿಡಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರಯತ್ನಿಸಬೇಕೆಂದರು.

. . . . . . .

ಸದರ್ ಉಸ್ತಾದ್ ಮಹಮೂದ್ ಸಖಾಫಿ ದುವಾ ನೆರವೇರಿಸಿದರು. ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥರವರು ಉತ್ತಮ ಮಳೆ ಗಾಳಿ ಆರೋಗ್ಯಕ್ಕಾಗಿ ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಬೇಕು ಪ್ರಕೃತಿಯ ಉಳಿವೂ ಹಾಗೂ ಬೆಳವಣಿಗೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಈ ಸಂದರ್ಭದಲ್ಲಿ ಎಲಿಮಲೆ ಮಸೀದಿ ಕಮಿಟಿ ಯವರು ವನಮಹೋತ್ಸವ ಆಚರಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡದ್ದಕ್ಕೆ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯ ಅಧಿಕಾರಿ ರವೀಂದ್ರ ,ಅರಣ್ಯ ರಕ್ಷಕರಾದ ಜಯಪ್ರಕಾಶ್ , ಚಿದಾನಂದ, ಅರಣ್ಯ ವೀಕ್ಷಕ ಸುರೇಂದ್ರ ಸಿಬ್ಬಂದಿಗಳು ಹಾಗೂ ಮಸೀದಿ ಹಿರಿಯರಾದ ಟಿ ವೈ ಇಬ್ರಾಹಿಂ. ಮಹಮ್ಮದ್ ಕುಂಚಿ ಮೇಲೆಬೈಲು.ಅಬೂಬಕ್ಕರ್ ಪಾಣಾಜೆ.ಕಲಂದರ್ ಎಲಿಮಲೆ. ಸಿದಿಕ್ ಜಿರ್ಮುಖಿ.ಸೂಫಿ ಎಲಿಮಲೆ ಜುನೈದ್ ಸಖಾಫಿ.ಅಬ್ದುಲ್ಲ ಜಿರ್ಮುಖಿ. ಹೈದರ್ ಹಾಜಿ.ಅಶ್ರಫ್ ಜಿರ್ಮುಖಿ ಹಾಗೂ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು ಕಾರ್ಯದರ್ಶಿ ಹನೀಫ್ ಮೇತಡ್ಕ ವಂದಿಸಿದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!