Ad Widget

ಅಡಿಕೆಯಿಂದ ಚಾ, ಸ್ಯಾನಿಟೈಸರ್ ತಯಾರಿಸಿದ ಮಲೆನಾಡಿನ ಯುವಕ

ಶಿವಮೊಗ್ಗ : ಲಾಕ್ಡೌನ್ ಹೊತ್ತಲೂ ಹಣ ಮಾಡಿದ್ದು ಸ್ಯಾನಿಟೈಸರ್ ಕಂಪನಿಗಳು ಮಾತ್ರ , ಕೋಟಿ ಕೋಟಿ ಲಾಭ ಗಳಿಸಿರುವುದನ್ನು ಕಂಡ ಮಲೆನಾಡಿನಸಂಶೋಧಕ , ಅಡಕೆಗೆ ಬಹು ಆಯಾಮದ ಮಾರುಕಟ್ಟೆ ಕಲ್ಪಿಸಿರುವ ಯುವಕರೊಬ್ಬರು ಅಡಕೆ ಸ್ಯಾನಿಟೈಸರ್‌ ಕಂಡುಹಿಡಿದು ಈಗ ಯಶಸ್ವಿಯಾಗಿದ್ದಾರೆ . ಅಷ್ಟೇ ಅಲ್ಲ ಕಂಪನಿ ಶುರು ಮಾಡಲು ಇಚ್ಛವುಳ್ಳವರಿಗೆ ಫಾರ್ಮುಲಾ ಕೊಡಲೂ ಸಿದ್ಧರಿದ್ದಾರೆ . ಮಲೆನಾಡಿನ ಮುಕ್ಕಾಲು ಭಾಗ ಅಡಕೆಯೇ ಆವರಿಸಿದೆ . ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಅಡಕೆ ಮರ ಕಾಣುತ್ತಿದೆ.ಗುಟ್ಕಾ ಗೆ ಮಾತ್ರ ಸೀಮಿತವಾಗಿದ್ದ ಅಡಕೆಗೆ ಹೊಸ ರೂಪ ಕೊಟ್ಟವರು ಮಲೆನಾಡಿನ ಯುವಕ ನಿವೇದನ್ ಸಂಪೆ . ಅಡಕೆ ಟೀ ಮೂಲಕ ಪ್ರಸಿದ್ದರಾಗಿ ಅದನ್ನು ಮಾರುಕಟ್ಟೆಗೆ ತಂದು ಯಶಸ್ಸು ಕಾಣುತ್ತಿದ್ದಾರೆ .

ಜತೆಗೆ ಕಾರಿನಲ್ಲಿ ಬಳಸುವ ಪರ್ಫ್ಯೂಮ್ ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ . ಹಲವು ಸಂಶೋಧನೆಗಳಿಂದ ಅಡಕೆಯಲ್ಲಿರುವ ವಿಶೇಷ ಅಂಶಗಳನ್ನು ತಿಳಿದುಕೊಂಡಿರುವ ಅವರು ಈಗ ಸ್ಯಾನಿಟೈಸರ್‌ ಕೂಡ ತಯಾರು ಮಾಡಿದ್ದಾರೆ .


ಏನಿದು ಸ್ಯಾನಿಟೈಸರ್‌ ?: ಅಡಕೆಯಲ್ಲಿ ಸ್ಯಾನಿಟೈಸರ್‌ ಮಾಡಬಹುದು . ಎಂದು ತಿಳಿದಿದ್ದೆ ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಸ್ನೇಹಿತರ ಜತೆ ಚರ್ಚೆ ಮಾಡುವಾಗ ಬಹುರಾಷ್ಟ್ರೀಯ ಕಂಪನಿಗಳು ಸ್ಯಾನಿಟೈಸರ್‌
ಮಾರಾಟದಿಂದ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವುದು ತಿಳಿದು , ಕೆಲಸವಿಲ್ಲದೇ ಬೆಂಗಳೂರು ಬಿಟ್ಟು ಬಂದು ಮನೆಯಲ್ಲಿರುವ ಯುವಕರಿಗೆ ಅನುಕೂಲವಾಗಲೆಂದು ಸಂಶೋಧನೆಗೆ ಮುಂದಾದರು . ಅದು ಈಗ ಸ್ಯಾನಿಟೈಸರ್‌ ರೂಪ ಪಡೆದಿದೆ . ಅಡಕೆಯಲ್ಲಿ ಆಯಂಟಿ ಮೈಕ್ರೋಬಿಯಲ್ ಪ್ರಾಪರ್ಟಿ ಇದ್ದು ಅದರ ಜತೆಗೆ ಅಕ್ಕೋಹಾಲ್ , ಟ್ಯಾನ್ ಬಳಸಿ ಸ್ಯಾನಿಟೈಸರ್ ಸಿದ್ಧಪಡಿಸಲಾಗಿದೆ.ಆ್ಯಂಟಿ ಮೈಕ್ರೋಬಯಲ್‌ ಪ್ರಾಪರ್ಟಿಯು ಕೀಟಾಣುಗಳ ವಿರುದ್ಧ ಹೋರಾಡುತ್ತದೆ . ಜತೆಗೆ ಸುಗಂಧ ಭರಿತ ಪರಿಮಳಕ್ಕೆ ಆರೆಂಜ್ ಆಯಿಲ್ ಬಳಸುತ್ತಾರೆ . ಮಾರುಕಟ್ಟೆಯಲ್ಲಿ 1 ಲೀಟರ್ ಸ್ಯಾನಿಟೈಸರ್‌ಗೆ 400 ರಿಂದ 500 ರೂ . ಇದೆ . ಅದಕ್ಕಿಂತ ಕಡಿಮೆ ದರಕ್ಕೆ ಸ್ಯಾನಿಟೈಸರ್‌ ಒದಗಿಸುವ ಉದ್ದೇಶದಲ್ಲಿ ನಿವೇದನ್ ಸಿದ್ಧರಿದ್ದಾರೆ . ಮಾರುಕಟ್ಟೆಯಲ್ಲಿ ಕೆಮಿಕಲ್‌ ಮಿಶ್ರಿತ ಸ್ಯಾನಿಟೈಸರ್‌ ಗಳೇ ಹೆಚ್ಚಾಗಿವೆ . ಇದು ಪಕ್ಕಾ ಹರ್ಬಲ್ ಪ್ರಾಡಕ್ಟ್ ಎನ್ನುತ್ತಾರೆ ನಿವೇದನ್ ನೆಂಪೆ ಫಾರಿನ್ ಕಂಪನಿಗಳು ಕೋಟಿ ಕೋಟಿ ಸಂಪಾದನೆ ಮಾಡುತ್ತಿವೆ . ಆತ್ಮನಿರ್ಭರ್ , ಸ್ವಾವಲಂಬಿ ಭಾರತ ಎಂಬ ದೊಡ್ಡ ಮಾತು ಹೇಳುತ್ತೇವೆ . ಆದರೆ ಅನುಷ್ಠಾನಕ್ಕೆ ತರುವುದಿಲ್ಲ . ಕಡಿಮೆ ವೆಚ್ಚದಲ್ಲಿ ಅಡಕೆ ಸ್ಯಾನಿಟೈಸರ್‌ ಉತ್ಪಾದನೆ ಮಾಡಬಹುದು . ಲಾಕ್‌ಡೌನ್ ನಂತರ ಸಾವಿರಾರು ಯುವಕರು ಕೆಲಸವಿಲ್ಲದೇ ಮನೆ ಸೇರಿದ್ದಾರೆ. ಯಾರಾದಾರೂ ಮುಂದೆ ಬಂದಲ್ಲಿ ಅವರಿಗೆ ಈ ಫಾರ್ಮುಲಾ ಜತೆಗೆ ಸಹಕಾರ ನೀಡಲಾಗುವುದು ಎಂದು ನಿವೇದನ್ ನೆಂಪೆ ತಿಳಿಸಿದ್ದಾರೆ.

ನಿವೇದನ್ ನೆಂಪೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!