ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಡೆಡ್ಲಿ ಕೊರೊನಾ ವೈರಸ್ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಮಾರಕವಾಗಿ ನಿಂತಿದೆ. ಈಗಷ್ಟೇ ಲಾಕ್ ಡೌನ್ ಕೂಡ ಸಡಿಲಿಕೆಯಾಗಿದೆ ದೈನಂದಿನ ಕೆಲಸವೂ ಶುರುವಾಗಿ ಬಿಟ್ಟಿವೆ. ಆದರೆ ಶಿಕ್ಷಣ ಕ್ಷೇತ್ರವು ಇನ್ನೂ ತೆರೆದಿಲ್ಲ ಇದು ಒಂದು ರೀತಿಯಲ್ಲಿ ಒಳ್ಳೆಯ ನಿರ್ಧಾರವಾದರೆ. ಮಕ್ಕಳ ಭವಿಷ್ಯಕ್ಕೆ ತುಂಬಾನೇ ಆಘಾತಕಾರಿ ಪರಿಣಾಮ ಬೀರುವುದು ಹೌದು. ಒಂದು ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಲಾಕ್ ಡೌನ್ ಸಡಿಲಿಕೆ ತರುತ್ತಿದ್ದರೆ ಇಷ್ಟರ ವೇಳೆ ಶೇಕಡ 50% ರಷ್ಟು ಸೋಂಕಿತರ ಸಂಖ್ಯೆ ಮಕ್ಕಳಲ್ಲಿ ಕಂಡು ಬರುತ್ತಿತ್ತೇನೋ. ಈ ನಿಟ್ಟಿನಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರವೇನು ತಪ್ಪಲ್ಲ. ಆದರೂ ಕೂಡ ಮುಂದಿನ ತಿಂಗಳುಗಳಲ್ಲಿ ಮಕ್ಕಳಲ್ಲಿ ಸಾಮಾಜಿಕ ಅಂತರ ಹಾಗೆಯೇ ಕೆಲ ದೈನಂದಿನ ಬದುಕಿಗೆ ಬೇಕಾಗುವ ರೀತಿ ಮಾಸ್ಕ್ ಸ್ಯಾನಿಟೈಸರ್ ಮಾಡಿಸುವ ಪ್ರಯತ್ನದಿಂದ ಮುಂದಿನ ತಿಂಗಳುಗಳಲ್ಲಿ ಶಿಕ್ಷಣ ಕ್ಷೇತ್ರವನ್ನು ಆರಂಭಿಸುವುದು ಉತ್ತಮ ಎಂದು ತೋಚುತ್ತದೆ.
ನಿತಿನ್ ನಾಯ್ಕ್ ಕಾನಾವು