Ad Widget

ಜು.2 ಕಾಂಗ್ರೆಸ್ ಪಕ್ಷದ ವತಿಯಿಂದ ತಾಲೂಕಿನಾದ್ಯಂತ ಝೂಂ ಆ್ಯಫ್ ಕಾರ್ಯಕ್ರಮ -ಎನ್ ಜಯಪ್ರಕಾಶ್ ರೈ


ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ .ಶಿವಕುಮಾರ್ ರವರ ಅಧಿಕಾರ ಸ್ವೀಕಾರ ಸಮಾರಂಭ ಏಕಕಾಲದಲ್ಲಿ   ರಾಜ್ಯದಾದ್ಯಂತ 7800ಕ್ಕೂ ಅಧಿಕ ಕಡೆಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಝೂಂ ಆ್ಯಫ್ ಮೂಲಕ ಕಾರ್ಯಕ್ರಮ ವೀಕ್ಷಿಸಲಿದ್ದು ಇದರ ಅಂಗವಾಗಿ ಸುಳ್ಯ ಬ್ಲಾಕ್ 5 ಜಿಲ್ಲಾ ಪಂಚಾಯತ್ ಹಾಗೂ 1 ನಗರಪಂಚಾಯತ್ ಪ್ರದೇಶಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಕೆಪಿಸಿಸಿಯ ನಿಯಮಾನುಸಾರ ಈ ಕಾರ್ಯಕ್ರಮದಲ್ಲಿ ಪಕ್ಷದ ಬ್ಯಾನರನ್ನು ಅಳವಡಿಸಿ ಒಂದು ರಾಷ್ಟ್ರಧ್ವಜ ಮತ್ತು ಒಂದು ಪಕ್ಷದ ಧ್ವಜ, ಕಾರ್ಯಕ್ರಮವನ್ನು ವೀಕ್ಷಿಸಲು 2 ಟಿವಿಗಳಲ್ಲಿ ನೇರ ವೀಕ್ಷಣೆಗೆ ಕಲ್ಪಿಸಿಕೊಡಲಾಗುವುದು. ಇದೇ ಸಂದರ್ಭದಲ್ಲಿ ಏಕಕಾಲದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಸಂದರ್ಭದಲ್ಲಿ ವೀಕ್ಷಣೆಯಲ್ಲಿ ಇರುವ ಎಲ್ಲಾ ಕಾರ್ಯಕರ್ತರು ಸಂವಿಧಾನದ ಪೀಠಿಕೆ ಯನ್ನು ಓದುವ ಮೂಲಕ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಬೇಕಾಗಿದೆ. ಕೊರೋನಾ ವೈರಸ್ ಮಹಾಮಾರಿ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರ  ಕಾರ್ಯಕ್ರಮದಲ್ಲಿ  ಮಾಸ್ಕ್ ಗಳನ್ನು ಬಳಸಿಕೊಳ್ಳುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಗಳನ್ನು ಬಳಸಿಕೊಳ್ಳುವುದು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಸುಳ್ಯ ನಗರ ಪ್ರದೇಶದ ಕಾರ್ಯಕರ್ತರಿಗೆ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ 11:00 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ 50ರಿಂದ 100 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಉಳಿದವರು ತಮ್ಮ ತಮ್ಮ ವಾರ್ಡುಗಳಲ್ಲಿ ಕಾರ್ಯಕರ್ತರುಗಳ ಮನೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಜೂನ್ 20ರಂದು ಸುಳ್ಯ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದೇ ಸಂದರ್ಭ ಮಾತನಾಡಿದ ಇವರು ಡಿಕೆ ಶಿವಕುಮಾರ್ ರವರ ಪದಗ್ರಹಣ ಕಾರ್ಯಕ್ರಮ ರಾಜ್ಯ ಮಟ್ಟದಲ್ಲಿ ದೊಡ್ಡ ಸಂಚಲವನ್ನು ಮೂಡಿಸಿದೆ. ಇವರು ಸಮರ್ಥ ನಾಯಕರು. ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಆಡಳಿತದಲ್ಲಿ ಗೊಂದಲ ಇದೆ .ಅತ್ಯಂತ ಹೆಚ್ಚು ಬೆಲೆಯಿಂದ ಪೆಟ್ರೋಲ್ ಖರೀದಿಸ ಬೇಕಾಗಿದೆ . ಭೂ ಮಸೂದೆಗೆ ತಿದ್ದುಪಡಿಯನ್ನು ತರುವ ಮೂಲಕ ಬಿಜೆಪಿ ಸರ್ಕಾರ ಬಂಡವಾಳ ಶಾಹಿ ಯವರಿಗೆ ಸಪೋರ್ಟ್ ಮಾಡುತ್ತಿದೆ  ಎಲ್ಲಾ ವಿಷಯಗಳಲ್ಲಿ ಸುಗ್ರೀವಾಜ್ಞೆ ಮಾಡುವುದರೊಂದಿಗೆ ರಾಷ್ಟ್ರದಲ್ಲಿ ಮೋದಿ ಸರ್ಕಾರ ದೇಶದ ವ್ಯವಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಜನಸಾಮಾನ್ಯರಿಗೆ ಬರುವ ಲಾಭವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ . ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶಕ್ಕೆ ಶತ್ರುಗಳ ಕಾಟ ಹೆಚ್ಚಾಗಿದೆ . ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡು ಬಂದಿತ್ತು ನೆರೆರಾಷ್ಟ್ರಗಳಾದ ನೇಪಾಳ ,ಬರ್ಮ ಕೂಡ ಈಗ ಭಾರತಕ್ಕೆ ಗುರಾಯಿಸ ತೊಡಗಿದೆ. ಕೇವಲ ಭಾಷಣದಿಂದ ಜನತೆಯನ್ನು ಮರಳು ಮಾಡಿ ಮತ ಗಿಟ್ಟಿಸಿಕೊಂಡು ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲಿದೆ ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಉಸ್ತುವಾರಿ ಕೃಷ್ಣಪ್ಪ ಮಾತನಾಡಿ ಡಿಕೆ ಶಿವಕುಮಾರ್ ರವರು ರಾಜ್ಯ ಕಂಡ ಅತ್ಯುತ್ತಮ ಸಂಘಟಕ ಟ್ರಬಲ್ ಶೂಟರ್ ಎಂದೇ ಖ್ಯಾತಿಯನ್ನು ಪಡೆದ ಶಿವಕುಮಾರ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ರಾಜ್ಯಕ್ಕೆ ಶಕ್ತಿ ಬಂದಿದೆ. ಪಕ್ಷದ ಯುವ ಸಮುದಾಯದಲ್ಲಿ ,ಹಿರಿಯರಲ್ಲಿ ಉಮ್ಮಸ್ಸು ಬಂದಿದೆ. ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಸಂಘಟನೆಯನ್ನು ಬಲಪಡಿಸಿ ಪಕ್ಷದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವೀಕ್ಷಕ ಜಿ.ಕೃಷ್ಣಪ್ಪ ಉಸ್ತುವಾರಿ ಮಹೇಶ್ ರೈ,ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಶಂಸುದ್ದೀನ್ ಅರಂಬೂರು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುದೀರ್ ರೈ ಮೆನಾಲ, ಸುಳ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ಸಚಿನ್ ರಾಜ್ ಶೆಟ್ಟಿ ,ಭವಾನಿ ಶಂಕರ್ ಕಲ್ಮಡ್ಕ ಎನ್ ಎಸ್ ಯು ಐ ಅಧ್ಯಕ್ಷ ಪವನ್ ಉಪಸ್ಥಿತರಿದ್ದರು

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!