
ಜೂನ್ ೨೦ ರಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗುತ್ತಿಗಾರಿಗೆ ಭೇಟಿ ನೀಡಲಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಎಸ್ ಅಂಗಾರ, ಹಾಗೂ ಜಿ.ಪಂ. ,ತಾ.ಪಂ. ಸದಸ್ಯರು ಉಪಸ್ಥಿತರಿರುವರು. ಗುತ್ತಿಗಾರು ಪ.ಪೂ.ಕಾಲೇಜಿನ ಕಟ್ಟಡ, ಗುತ್ತಿಗಾರು ಪೇಟೆಯ ಅಟೋ ರಿಕ್ಷಾ ನಿಲ್ದಾಣ, ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಜನಪದ ಕಲಾವಿದೆ ನವಸಾಕ್ಷರೆ ದಿ. ಕುಂಞಕ್ಕ ಇವರ ಸ್ಮಾರಕ ಸಭಾಭವನ ಹಾಗೂ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಹಾಗೂ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಆಶಾ ಕಾರ್ಯಕರ್ತೆ ಯರಿಗೆ ಸನ್ಮಾನ ಹಾಗೂ ಸದಸ್ಯರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕೊರೋನಾ ಮುನ್ನೆಚ್ಚರಿಕೆಯ ನೆಲೆಯಲ್ಲಿ ಸುಮಾರು 50 ಜನರ ಮಿತಿಗೊಳಪಟ್ಟು ಕಾರ್ಯಕ್ರಮ ನಡೆಯ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪಿಡಿಓ ಪ್ರಕಟಣೆ ಯಲ್ಲಿ ಸೂಚಿಸಿರುತ್ತಾರೆ.