ಸುಳ್ಯ ನಗರ ಪಂಚಾಯತ್ ಕಚೇರಿಯ ಆವರಣದಲ್ಲಿ ಕಸದರಾಶಿಯನ್ನು ಹಲವಾರು ಸಮಯಗಳಿಂದ ಸಂಗ್ರಹಿಸಿಡಲಾಗಿದ್ದು ಇದರಿಂದ ಸ್ಥಳೀಯ ಸಾರ್ವಜನಿಕರಿಗೆ ಹಾಗೂ ಕಚೇರಿಗೆ ದಿನನಿತ್ಯ ಬರುತ್ತಿರುವ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.ಕಸದ ರಾಶಿಯಿಂದ ದುರ್ವಾಸನೆ ಬೀರ ತೊಡಗಿದ್ದು ಈ ಪ್ರದೇಶದಲ್ಲಿ ನಡೆದಾಡಲು ಕಷ್ಟವಾಗುತ್ತಿದೆ .ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ತ್ಯಾಜ್ಯವಸ್ತುಗಳು ನೀರಿನೊಂದಿಗೆ ಸೇರಿ ನಗರದ ಚರಂಡಿಗಳಿಗೆ ಹರಿದು ಈ ಪ್ರದೇಶಗಳಲ್ಲಿ ಡೆಂಗ್ಯೂ ಚಿಕನ್ ಗುನ್ಯಾ ಇನ್ನಿತರ ಮಾರಕ ರೋಗಗಳಿಗೆ ಕಾರಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದುದರಿಂದ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕಸವನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿ ಸುಳ್ಯ ತಹಶೀಲ್ದಾರ್ ಅನಂತ ಶಂಕರ್ ರವರಿಗೆ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಸಂಚಾಲಕ ಆರ್ ಬಿ ಬಶೀರ್, ಮುಜೀಬ್ ಪೈಚಾರ್,ನ. ಪಂ ಸದಸ್ಯ ಶರೀಫ್ ಕಂಠಿ ಮೊದಲಾದವರು ಉಪಸ್ಥಿತರಿದ್ದರು.
- Thursday
- November 21st, 2024