Ad Widget

ಕಳೆದ ಬಾರಿ ಗುಡ್ಡ ಕುಸಿದು ಅಪಾಯ ಸ್ಥಿತಿಯಲ್ಲಿರುವ ಪ್ರದೇಶಕ್ಕೆ ಅಧ್ಯಯನ ಭೇಟಿ

ಸುಬ್ರಹ್ಮಣ್ಯ ಮಲೆನಾಡು ಜನಹಿತ ರಕ್ಷಣ ವೇದಿಕೆ ವತಿಯಿಂದ ಕೊಲ್ಲಮೊಗ್ರ ಗ್ರಾ.ಪಂ. ವ್ಯಾಪ್ತಿಯ ಗುಳಿಕ್ಕಾನ ಪ್ರದೇಶಕ್ಕೆ ಅಧ್ಯಯನ ಭೇಟಿ ಜೂ.೧೮ ರಂದು ನಡೆಸಲಾಯಿತು . ಕಳೆದ ಮೂರು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಕಲ್ಮಕಾರು ಬಳಿಯ ಗುಳಿಕ್ಕಾನ ಭಾಗದಲ್ಲಿ ಗುಡ್ಡ ಕುಸಿದಿದ್ದು , ಅಪಾಯ ಆಹ್ವಾನಿಸುತ್ತಿದೆ . ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಇಲ್ಲಿನ 10 ಮನೆಯವರಿಗೆ ತಾತ್ಕಾಲಿಕ ನಿರಾಶ್ರಿತರ ಕೇಂದ್ರ ತೆರೆಯಲಾಗುತ್ತಿದೆ . ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಭೇಟಿ ನೀಡಿ , ಇಲ್ಲಿನವರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಸರಕಾರದಿಂದ ಪುನರ್ವಸತಿ ಕಲ್ಪಿಸುವ ಸಲುವಾಗಿ ಪ್ರಯತ್ನಿಸುವುದು ಜತೆಗೆ ವೇದಿಕೆ ವತಿಯಿಂದ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಒತ್ತಾಯಿಸುವುದಾಗಿ ತೀರ್ಮಾನಿಸಲಾಯಿತು .
ಈ ಸಂದರ್ಭ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ , ಸದಸ್ಯರಾದ ಜಯಪ್ರಕಾಶ್ ಕೂಜುಗೋಡು , ರವೀಂದ್ರ ಕುಮಾರ್ ರುದ್ರಪಾದ , ಸತೀಶ್ ಟಿ , ಎನ್ . , ಭರತ್ ಕನ್ನಡ್ಕ, ಭಾನುಪ್ರಕಾಶ್ , ಶೇಖರಪ್ಪ ಬೆಂಡೋಡಿ , ಉಮೇಶ್ ಉಪಸ್ಥಿತರಿದ್ದರು .

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!