ಪ್ರಸ್ತುತ ಸಂದಿಗ್ಧ ಘಟ್ಟದಲ್ಲಿ ಮದ್ರಸ ಶಿಕ್ಷಣ ಮೊಟಕುಗೊಂಡದ್ದನ್ನು ಪರಿಹರಿಸಲು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮತ್ತು ಎಸ್ ಕೆ ಐ ಎಂ ವಿ ಬಿ ನಿರ್ದೇಶಿಸಿದ ಸಮಸ್ತ ಆನ್ಲೈನ್ ತರಗತಿಯನ್ನು ಯಶಸ್ವಿಗೊಳಿಸಲು ಸುಳ್ಯ ರೇಂಜ್ ಮದ್ರಸ ಮೇನೇಜ್ಮೆಂಟ್ ಅಸೋಸಿಯೇಶನ್ ಕರೆ ನೀಡಿತು. ಸುಳ್ಯದ ಪರಿವಾರಕಾನದ ಗ್ರಾಂಡ್ ಪರಿವಾರ್ ಹಾಲ್’ನಲ್ಲಿ ನಡೆದ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ರೇಂಜ್ ಮದ್ರಸ ಮೇನೇಜ್ಮೆಂಟ್ ಅಧ್ಯಕ್ಷ ತಾಜ್ ಮುಹಮ್ಮದ್ ಸಂಪಾಜೆ ವಹಿಸಿದರು. ಕೋಶಾಧಿಕಾರಿ ಹಾಜಿ ಎಸ್.ಎ ಹಮೀದ್ ದುವಾ ನೆರವೇರಿಸಿದರು. ದ.ಕ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಆನ್ಲೈನ್ ತರಗತಿಯ ಅನಿವಾರ್ಯತೆ ಮತ್ತು ಬಳಕೆಯ ಕುರಿತು ವಿಷಯ ಮಂಡಿಸಿದರು. ಪ್ರಮುಖರಾದ ಅಬ್ಬಾಸ್ ಹಾಜಿ ಸಂಟ್ಯಾರ್, ಹಾಜಿ ಇಬ್ರಾಹಿಂ ಮಂಡೆಕೋಲ್, ಹಸೈನಾರ್ ಧರ್ಮತ್ತಣ್ಣಿ, ಹಾಜಿ ಅಬ್ದುಲ್ ಖಾದರ್ ಪಟೇಲ್,ಹಾಜಿ ಅಹ್ಮದ್ ಸುಪ್ರೀಂ, ಅಕ್ಬರ್ ಕರಾವಳಿ ಹಾಗೂ ಸುಳ್ಯ ರೇಂಜ್ ವ್ಯಾಪ್ತಿಯ ವಿವಿಧ ಮಸೀದಿ ಮದ್ರಸ ಆಡಳಿತ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದರು. ಪ್ರ.ಕಾರ್ಯದರ್ಶಿ ಬಶೀರ್ ಯು ಪಿ ಬೆಳ್ಳಾರೆ ಸ್ವಾಗತಿಸಿ, ವಂದಿಸಿದರು.