ಭಾರತ- ಚೀನಾ ನಡುವೆ ಲಡಾಖ್ ಗಡಿಯ ಗಾಲ್ವಾನ್ ಕಣಿವು ಚೀನಾ ನಡೆಸಿದ ಅಪ್ರಚೋದಿತ ದಾಳಿಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ . ಇದೇ ವೇಳೆ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಗೆ ಚೀನಾದ 4 ಸೈನಿಕರು ಹತರಾಗಿದ್ದಾರೆ ಎಂದು ವರದಿಯಾಗಿದೆ . ಸೋಮವಾರ ರಾತ್ರಿ ಚೀನಾ ನಡೆಸಿದ ದಾಳಿಗೆ ಭಾರತೀಯ ಸೇನೆಯ ಓರ್ವ ಅಧಿಕಾರಿ ಸೇರಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು ಎಂದು ವರದಿಯಾಗಿತ್ತು . ಇದೀಗ ಮತ್ತ ಚೀನಾ ನಡೆಸಿದ ದಾಳಿಗೆ ಭಾರತದ ಸುಮಾರು 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆಯು ಸ್ಪಷ್ಟಪಡಿಸಿದೆ. ಇದಕ್ಕೆ ಪ್ರಬಲವಾದ ಪ್ರತ್ಯುತ್ತರ ನೀಡಿರುವ ಸೇನೆ 43 ಚೀನಾದ ಸೈನಿಕರ ಹತ್ಯೆಗೈಯಲಾಗಿದೆ. ಎರಡು ಕಡೆಯ ಸಾವಿನ ಬಗ್ಗೆ ಖಚಿತವಾದ ಮಾಹಿತಿಗಳು ಲಭ್ಯವಾಗಿಲ್ಲ.
ಲಡಾಕ್ ನ ಲೈನ್ ಆಪ್ ಕಂಟ್ರೋಲ್ ಪ್ರದೇಶದಲ್ಲಿ ಗುಂಡು ಹಾರಿಸುವಂತಿಲ್ಲ. ಆದರೇ ಅಲ್ಲಿ ಸೈನಿಕರಿಂದ ಬಡಿದಾಟ ಆರಂಭವಾಗಿ ನಂತರ ಗುಂಡಿನ ಚಕಮಕಿ ನಡೆಯಿತೆಂದು ತಿಳಿದು ಬಂದಿದೆ. ಇದು ಯುದ್ಧಕ್ಕೆ ನಾಂದಿ ಹಾಡುತ್ತದೆಯೋ ಎಂದು ಕಾದು ನೋಡಬೇಕಾಗಿದೆ.
- Thursday
- November 21st, 2024