Ad Widget

ಕೊನೆಗೂ ಒದಗಿ ಬಂದ ಸೂರು ಭಾಗ್ಯ- ಕ.ರ.ವೇ ಸ್ವಾಭಿಮಾನಿ ಬಣದಿಂದ ಪೂರ್ಣಗೊಂಡ ದುರಸ್ತಿಕಾರ್ಯ

ಕಳೆದ ಎರಡು ವರ್ಷಗಳಿಂದ ಸುಳ್ಯದ ಶಾಂತಿನಗರ ಪರಿಸರದಲ್ಲಿ ಸುಂದರ ಹಾಗೂ ಲಕ್ಷ್ಮಿ ಎಂಬುವರ ಮನೆಯೊಂದು ಸಂಪೂರ್ಣವಾಗಿ ಗೋಡೆಗಳು ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿ ನಿಂತಿದ್ದವು. ಇದೇ ಮನೆಯಲ್ಲಿ ಸುಂದರ ಹಾಗೂ ಲಕ್ಷ್ಮಿ ಎಂಬ ದಂಪತಿಗಳು ವಾಸಿಸುತ್ತಿದ್ದು ಸುಂದರ ತನ್ನ ಕಾಲಿನ ಅನಾರೋಗ್ಯದಿಂದ ಸಂಪೂರ್ಣವಾಗಿ ಹಾಸಿಗೆಯಲ್ಲಿ ಇದ್ದರು. ಹೆಂಡತಿ ಲಕ್ಷ್ಮಿ ಬೀಡಿಕಟ್ಟಿ ತಮ್ಮ ಕುಟುಂಬದ ಜೀವನವನ್ನು ಸಾಗಿಸುತ್ತಿದ್ದರು. ಬಿರುಕು ಬಿಟ್ಟಿರುವ ಮನೆಯ ಗೋಡೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗದೇ ಮನೆಯ ಮೇಲ್ಚಾವಣಿ ಅಂಚುಗಳನ್ನು ಕೂಡ ಸರಿಪಡಿಸಿಕೊಳ್ಳಲು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಅಪಾಯದ ಮುನ್ಸೂಚನೆ ಇದ್ದರೂ ಕೂಡ ಏನನ್ನು ಮಾಡಲು ಸಾಧ್ಯವಾಗದ ಕಾರಣ ಭಯದ ಜೀವನವನ್ನು ಸಾಗಿಸುತ್ತಿದ್ದರು.

. . . . . . .


ಈ ವಿಷಯವನ್ನು ಸ್ಥಳೀಯ ಒಬ್ಬರಿಂದ ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರರಿಗೆ ವಿಷಯ ಬಂದಾಗ ಅದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಕುಟುಂಬದ ಸಹಾಯಕ್ಕಾಗಿ ವಿನಂತಿಸಿಕೊಳ್ಳಲಾಗಿತ್ತು.ಇದಕ್ಕೆ ಕೂಡಲೇ ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಅಧ್ಯಕ್ಷ ಉನೈಸ್ ಪೆರಾಜೆಯವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳದ ಪರಿಸ್ಥಿತಿಯನ್ನು ತಮ್ಮ ಕ್ಯಾಮೆರಾ ಮೂಲಕ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಹಾಯಕ್ಕಾಗಿ ವಿನಂತಿಸಿಕೊಳ್ಳಲಾಗಿತ್ತು.ಆದರೆ ಅದೇ ಸಂದರ್ಭದಲ್ಲಿ ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಇದೇ ಸಮಯದಲ್ಲಿ ಅನಾರೋಗ್ಯದಲ್ಲಿದ್ದ ಸುಂದರ ರವರು ನಿಧನರಾದರು.ನಂತರ ಆ ಮನೆಯಲ್ಲಿ ಸುಂದರ ರವರ ಪತ್ನಿ ಲಕ್ಷ್ಮಿ ಹಾಗೂ ಸುಂದರ್ ಅವರ ಸಹೋದರ ದಿವಂಗತ ಬೇಡು ಅವರ ಪತ್ನಿ ಯಶೋದಾ ಪುತ್ರಿ ನಳಿನಿ ಯೊಂದಿಗೆ ಬೇರೆ ದಾರಿಯಿಲ್ಲದೆ ಇದೇ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು.ಅಷ್ಟರಲ್ಲಿ ಆಗಲೇ ಮನೆಯ ಮುಕ್ಕಾಲುಭಾಗ ಸಂಪೂರ್ಣವಾಗಿ ಕುಸಿದು ಮನೆಯಲ್ಲಿದ್ದವರು ಎದುರು ಭಾಗದಲ್ಲಿ ಒಂದು ಕೋಣೆಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಅಳಲನ್ನು ಯಾರೊಂದಿಗೂ ತೋಡಿಕೊಳ್ಳಲು ಸಾಧ್ಯವಾಗದೆ ದಿನ ಕಳೆಯುತ್ತಿದ್ದರು. ಇದೀಗ ಮಳೆಗಾಲ ಆರಂಭವಾಗಿದ್ದು ಮಳೆಯ ಸಂಪೂರ್ಣ ನೀರು ಒಳಗಡೆ ಇದ್ದು ಇದು ನೋಡಿದವರ ಕರುಳು ಕಿತ್ತು ಬರುವ ರೀತಿಯಲ್ಲಿ ಚಿಂತಾಜನಕವಾಗಿತ್ತು.
ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿದ ಉನೈಸ್ ಪೆರಾಜೆ ವಿಷಯವನ್ನು ಅರಿತು ಕೂಡಲೇ ಪರ್ಯಾಯ ಒಂದು ವ್ಯವಸ್ಥೆ ಕಲ್ಪಿಸಿಕೊಳ್ಳಲು ತೀರ್ಮಾನಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ ಅವರಿಗೆ ವಿಷಯವನ್ನು ತಿಳಿಸಿದರು. ಜೂನ್ 17ರಂದು ಮಹಮ್ಮದ್ ಕುಕ್ಕುವಳ್ಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾಂತೂರು ನಿವಾಸಿ ಹಾಗೂ ದುಬೈಯಲ್ಲಿ ಉದ್ಯಮಿಯಾಗಿರುವ ಅಶ್ರಫ್ ಖಾನ್ ಮಾಂತೂರ್ ರವರ ನೆರವಿನ ಸಹಾಯ ಹಸ್ತದಿಂದ ಕೂಡಲೇ ಮನೆಯ ಮೇಲ್ಚಾವಣಿ ಸೀಟು ಅಳವಡಿಸಿಕೊಡಲು ತೀರ್ಮಾನಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ಹಸೈನಾರ್ ಜಯನಗರ ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ವಸಂತ ಪಟ್ಟೆ, ನಾಸಿರ್,ಆಶಿಫ್ ಹಾಜಿ ತಂಬುತಡ್ಕ, ವಸಂತ, ಸುಂದರ, ಸತ್ಯನಾರಾಯಣ, ಸುಳ್ಯ ಯುವ ಘಟಕದ ಅಧ್ಯಕ್ಷ ಮಹಮ್ಮದ್ ಫೈಸಲ್ ಜಟ್ಟಿಪಳ್ಳ, ಸದಸ್ಯರಾದ ಅಬ್ದುಲ್ ರೆಹಮಾನ್ ಪಿ ಕೆ ,ನಾಸೀರ್, ಬಾತಿಶ, ಸತ್ಯನಾರಾಯಣ, ಸಿಯಾಬ್ , ಉವೈಸ್ ಸಹದಿ , ಜಿಲ್ಲಾ ಸಮಿತಿಯ ಸದಸ್ಯರು ಸಂಪೂರ್ಣ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!